ಕಬ್ಬಿನಾಲೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಕ್ರೀಡಾಕೂಟ

0
110

ಹೆಬ್ರಿ :ಕಬ್ಬಿನಾಲೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 39 ನೇ ವರ್ಷದ ಗಣೇಶೋತ್ಸವವು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಆ. 27 ರಿಂದ 29 ರ ತನಕ ನಡೆಯಲಿದ್ದು ಅದರ ಅಂಗವಾಗಿ ಕಬ್ಬಿನಾಲೆ ಕೊಂಕಣಾರಬೆಟ್ಟು ಶಾಲಾ ಮೈದಾನದಲ್ಲಿ ಕ್ರೀಡಾ ಕೂಟವು 17.08.2025 ರ ಭಾನುವಾರ ನಡೆಯಿತು.

ಕ್ರೀಡೋತ್ಸವವನ್ನು ಸಮಿತಿ ಅಧ್ಯಕ್ಷರಾದ ಯೋಗೀಂದ್ರ ಹೆಬ್ಬಾರ್ ಉದ್ಘಾಟಿಸಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ರಾಘವೇಂದ್ರ ಭಟ್, ಉಪಾಧ್ಯಕ್ಷರಾದ ಅಚ್ಯುತ ಪೂಜಾರಿ ಮತ್ತು ಸದಾಶಿವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಾಗರಾಜ ಶೆಟ್ಟಿಗಾರ್, ಜೊತೆ ಕಾರ್ಯದರ್ಶಿ ಸುನೀತ ಅಶೋಕ್ ಪೂಜಾರಿ, ಕೋಶಾಧಿಕಾರಿ ಪ್ರವೀಣ್ ಕಬ್ಬಿನಾಲೆ, ಶಾಲಾ ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಸೀತಾರಾಮ ಕುಲಾಲ್, ಪಂಚಾಯತ್ ಸದಸ್ಯರಾದ ಜಗದೀಶ್ ಪೂಜಾರಿ, ಪಂಚಾಯತ್ ಸದಸ್ಯೆ ಪಲ್ಲವಿ ಸಾತ್ವಿಕ್ ಹೆಬ್ಬಾರ್, ಚಂದ್ರಶೇಖರ ಬಾಯರಿ,ಗೋವಿಂದ ಪೂಜಾರಿ, ಕಾಪೋಳಿ ಶ್ರೀಧರ್ ಹೆಬ್ಬಾರ್, ಕ್ರೀಡಾ ಕಾರ್ಯದರ್ಶಿ ರಮೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಸಾರ್ವಜನಿಕಕರು, ಮಹಿಳೆಯರು, ಮಕ್ಕಳು, ಸಮಿತಿ ಸದಸ್ಯರು ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಿದರು.

LEAVE A REPLY

Please enter your comment!
Please enter your name here