ಕಡಬ ತಾಲೂಕು ಕೃಷಿಕ ಸಮಾಜ, ಹೋಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ತೋಟಗಾರಿಕೆ ಇಲಾಖೆ ಪುತ್ತೂರು, ಕೃಷಿ ಇಲಾಖೆ ಪುತ್ತೂರು ಇವುಗಳ ವತಿಯಿಂದ, ಅಡಿಕೆ ಕೃಷಿ ಸಮಗ್ರ ನಿರ್ವಹಣೆ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮವನ್ನು, ನ.10, ಸೋಮವಾರ ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ , ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ಕೋರಂಗ ಉದ್ಘಾಟಿಸಿ ಶುಭಹಾರೈಸಿದರು. ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮನ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಹೊಸಮಠ ಸಿ ಎ ಬ್ಯಾಂಕ್ ಅಧ್ಯಕ್ಷ ಶ್ರೀ ಕೃಷ್ಣಪ್ಪ ದೇವಾಡಿಗ ಸನಿಲ, ಪ್ರಗತಿಪರ ಕೃಷಿಕರಾದ ಶ್ರೀ ಎಂ ರಾಜಾರಾಮ್ ಭಟ್ ಹೊಸಮಠ ಅತಿಥಿಗಳಾಗಿ ಭಾಗವಹಿಸಿದ್ದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಶ್ರೀಮತಿ ಡಾ. ರಶ್ಮಿ, ಪುತ್ತೂರು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಶ್ರೀಮತಿ ರೇಖಾ, ಪುತ್ತೂರು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ಶ್ರೀ ಟಿ ಜಿ ಚೆಲುವರಂಗಪ್ಪ ಮಾಹಿತಿಗಳನ್ನು ನೀಡಿದರು . ಸಿ ಎ ಬ್ಯಾಂಕ್ ಉಪಾಧ್ಯಕ್ಷ ಚಿದಾನಂದ ಕೊಡಂಕಿರಿ, ಕೃಷಿಕ ಸಮಾಜದ ಪ್ರ. ಕಾರ್ಯದರ್ಶಿ ಸುದರ್ಶನ್ ಶಿರಾಡಿ,, ಕಾರ್ಯಕ್ರಮ ಸಂಯೋಜಕ ಪ್ರಕಾಶ್ ಪಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಸ್ವಾಗತಿಸಿದರು. ಸಿ ಎ ಬ್ಯಾಂಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಸೋಮಸುಂದರ ಶೆಟ್ಟಿ ಧನ್ಯವಾದ ನೀಡಿದರು.

