ಜೇಸಿಐ ಮುಂಡ್ಕೂರು ಭಾರ್ಗವದ ಜೇಸಿ ಸಪ್ತಾಹ-2025 “ವಸಂತ ಪರ್ವ” ದ ಸಮಾರೋಪ ಸಮಾರಂಭ ಕಾರ್ಯಕ್ರಮವು ದಿನಾಂಕ 15/9/2025 ರಂದು ಶ್ರೀ ಸುಬ್ರಹ್ಮಣ್ಯ ಪ್ರೌಢಶಾಲೆ ಕಡಂದಲೆಯಲ್ಲಿ ನೆರವೇರಿತು, ಇದರ ಸಭಾಕಾರ್ಯಕ್ರಮದಲ್ಲಿ ಜೇಸಿ ಅಧ್ಯಕ್ಷರಾದ ವಸಂತ ಅಧ್ಯಕ್ಷತೆಯನ್ನು ವಹಿಸಿ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿದರು.

ಮುಖ್ಯ ಅತಿಥಿಗಳಾಗಿರುವ ಉದಯ ಕುಮಾರ್ ಶೆಟ್ಟಿ ಇನ್ನಾರವರ ಜೇಸಿ ಗೆ ಸೇರುವಂತೆ ಪ್ರೇರೇಪಣೆಯ ಮಾತುಗಳನ್ನಾಡಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಅಡ್ವೊಕೇಟ್ ಗಿರೀಶ್ S P ಜೇಸಿಯಿಂದ ನಮಗೆ ಆಗುವ ಲಾಭದ ಬಗ್ಗೆ ಮಾತನಾಡಿದರು. ರೋಟರಿ ಅಧ್ಯಕ್ಷರಾದ ಸಾಯಿನಾಥ ಶೆಟ್ಟಿ ರವರು ಜೇಸಿಯ ಬಗೆಗಿನ ಸವಿ ನೆನಪುಗಳನ್ನು ಮೆಲುಕು ಹಾಕಿದರು. ವಲಯ ಉಪಾಧ್ಯಕ್ಷರಾದ ಪ್ರಶಾಂತ ಕುಮಾರ ರವರು ಪೂರ್ವಾಧ್ಯಕ್ಷರ ನೆಲೆಯಲ್ಲಿ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಿದರು.
ಸೀತಾರಾಮ್ ಸಾಲಿಯಾನ್ (ಮುಖ್ಯಸ್ಥರು ಆಟೋ ಚಾಲಕರು ಮತ್ತು ಮಾಲಕರು ವಿದ್ಯಾಗಿರಿ ಬಿ ಟಿ ರೋಡ್) ರವರು ಜೇಸಿಯುವರು ನೀಡಿದ ರಿಕ್ಷಾ Stand ನ ಕೊಡುಗೆಯನ್ನು ಮೆಲುಕು ಹಾಕಿದರು, ಕಾರ್ಯಕ್ರಮ ನಿರ್ದೇಶಕರಾದ ಅಶ್ವಿನಿ ಅಮೀನ್ ರವರು ಧನ್ಯವಾದ ಮಾಡಿದರು.
ವರದಿ: ಜಗದೀಶ್ ಪೂಜಾರಿ ಕಡಂದಲೆ

