ಕಡಂದಲೆ: ಅಪಘಾತದ ಗಾಯಾಳುವಿಗೆ ಹೊಸಬೆಳಕು ಸಮಾಜಸೇವಾ ಬಳಗದಿಂದ ಆರ್ಥಿಕ ನೆರವು

0
62


ಮೂಡುಬಿದಿರೆ: ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಡಂದಲೆ ಕುಕ್ಕುಂಜೆ ನಿವಾಸಿ ಶಿವರಾಮ್ ಸುವರ್ಣ ಅವರಿಗೆ ಹೊಸಬೆಳಕು ಸಮಾಜಸೇವಾ ಬಳಗವು ಆರ್ಥಿಕ ನೆರವು ನೀಡಿದೆ.
ಸಂಸ್ಥೆಯ ತುರ್ತು ಸೇವಾ ನಿಧಿಯಿಂದ ಒಟ್ಟು 10,000 ರೂಪಾಯಿ ಧನಸಹಾಯವನ್ನು ಸೋಮವಾರ ಹಸ್ತಾಂತರಿಸಲಾಯಿತು.
ಹೊಸಬೆಳಕು ಸಮಾಜಸೇವಾ ಬಳಗದ ಸಂಸ್ಥಾಪಕ ಅಧ್ಯಕ್ಷರು, ಪದಾಧಿಕಾರಿಗಳು, ಕಡಂದಲೆ-ಪಾಲಡ್ಕ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸೇವಾದಳ ಅಧ್ಯಕ್ಷರಾದ ಸೀತಾರಾಮ ಸಾಲ್ಯಾನ್, ತುಳುನಾಡ ವಾರ್ತೆ ವಾರಪತ್ರಿಕೆಯ ಪತ್ರಕರ್ತರಾದ ಜಗದೀಶ್ ಸಾಲ್ಯಾನ್ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here