ಮೂಡುಬಿದಿರೆ: ಸಾರ್ವಜನಿಕ ಗಣೇಶೋತ್ಸವ ಸಮಿಮಿ ಟ್ರಸ್ಟ್ (ರಿ.) ಕಡಂದಲೆ ವತಿಯಿಂದ ನಡೆದ 45ನೇ ಸಾರ್ವಜನಿಕ ಗಣೇಶೋತ್ಸವವು ಆ. 27 ಬುಧವಾರ ಹಾಗೂ 28 ಗುರುವಾರದಂದು ಶ್ರೀ ಗಣೇಶ್ ದರ್ಶನ್ ಸಭಾಭವನದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ಆಗಸ್ಟ್ 28ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾಪ್ತಿಗೊಂಡು ಸಂಜೆ ದೇವರ ವೈಭವದ ಭವ್ಯ ಮೆರವಣಿಗೆಯೊಂದಿಗೆ ಶ್ರೀ ಗಣಪತಿ ದೇವರನ್ನು ವಿಸರ್ಜನೆ ಮಾಡಲಾಯಿತು.