ವಿದ್ಯಾರ್ಥಿಗಳಲ್ಲಿ ವಿಜ್ಞಾನ , ಗಣಿತ,ತಂತ್ರಜ್ಞಾನ, ಭಾಷೆ, ಭಾರತದ ಪರಂಪರೆ, ಸಾಮಾನ್ಯ ಜ್ಞಾನ ಹಾಗೂ ಇತರ ವಿಷಯಗಳಲ್ಲಿ ಅರಿವಿನ ಮಟ್ಟವನ್ನು ಹೆಚ್ಚಿಸಲು ಪೂರಕವಾಗುವಂತೆ ಹಾಗೂ ಕಲಿಕೆಯಲ್ಲಿ ಆಸಕ್ತಿ , ಸ್ಪರ್ಧಾ ಮನೋಭಾವ ಬೆಳೆಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಸರಕಾರಿ ಶಾಲೆಗಳು ಪಾಲ್ಗೊಳ್ಳುವಂತೆ ವಿವಿದ ಹಂತಗಳಲ್ಲಿ ರಾಷ್ಟ್ರೀಯ ಆವಿಷ್ಕಾರ ಅಭಿಯಾನದಡಿ ಸಮಗ್ರ ಶಿಕ್ಷಣ ಕರ್ನಾಟಕ ,ಯೋಜನಾ ಅನುಮೋದನ ಮಂಡಳಿಯು ರಸಪ್ರಶ್ನೆ ಆಯೋಜಿಸಿದೆ .

ಮೂಡಬಿದರೆ ತಾಲೂಕು ಹಂತದ ಪ್ರಾಥಮಿಕ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ದ ಕ.ಜಿ ಪಂ ಹಿರಿಯ ಪ್ರಾಥಮಿಕ ಶಾಲೆ ಕಡಂದಲೆ ಮೈನ್ ಇಲ್ಲಿಯ 7ನೇ ತರಗತಿ ವಿದ್ಯಾರ್ಥಿನಿ ಮೋಕ್ಷ ಪಿ ಕುಂದರ್ ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗೆ ಅಭಿನಂದಿಸಿ ಜಿಲ್ಲಾ ಮಟ್ಟದ ರಸಪ್ರಶ್ನೆಗೆ ಸಹಾಯಕವಾಗುವ ಸಾಮಗ್ರಿಗಳನ್ನು ಒದಗಿಸಿ ಶುಭಾಶಯ ತಿಳಿಸಿದ್ದಾರೆ.

