ಮೂಡುಬಿದಿರೆ: ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘ (ರಿ.) ಕಡಂದಲೆ ಪಾಲಡ್ಕ. ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ171ನೇ ಜನ್ಮ ದಿನಾಚರಣೆಯ ಆಮಂತ್ರಣ ಪತ್ರಿಕೆಯನ್ನು ಅಧ್ಯಕ್ಷರಾದ ಲೀಲಾದರ ಪೂಜಾರಿಯವರು ಬಿಡುಗಡೆ ಮಾಡಿದರು.
ಈ ಸಮಯದಲ್ಲಿ ಕಾರ್ಯದರ್ಶಿ ನಿತೀನ್ ಅಮೀನ್, ರಾಜೇಶ್ ಕೆಂಜ, ಸೇವಾದಾಳ ಅಧ್ಯಕ್ಷ ಸೀತಾರಾಮ ಸಾಲ್ಯಾನ್, ಮಹಿಳಾ ಘಟಕ ಅಧ್ಯಕ್ಷ ರಾದ ಸೌಮ್ಯ ಗಣೇಶ್ ಕೋಟ್ಯಾನ್,ಗೌರವ ಅಧ್ಯಕ್ಷರಾದ ಜಾನಕಿ ವಸಂತ್, ಗೌರವ ಸಲಹೆಗರಾರಾದ ಪದ್ಮನಾಭ ಯಸ್ ಅಮೀನ್, ಶ್ರೀಯುತ ಸುಧಾಕರ ಪೂಜಾರಿ ಕುಕ್ಕುಂಜೆ, ಜೊತೆ ಕಾರ್ಯದರ್ಶಿ ಜ್ಯೋತಿ ಸೀತಾರಾಮ್, ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಸದಾನಂದ ಶಾಂತಿ ಪ್ರದಾನ ಅರ್ಚಕರು, ಶ್ರೀ ಕೃಷ್ಣ ಕ್ಷೇತ್ರ, ಆನೆಕೆರೆ ಕಾರ್ಕಳ ಇವರ ಉಪಸ್ಥಿತಿಯಲ್ಲಿ ದಿನಾಂಕ: 7.09.2025ನೇ ಆದಿತ್ಯವಾರ, ಪೂರ್ವಾಹ್ನ ಗಂಟೆ 8.00ರಿಂದ ಭಜನಾ ಕಾರ್ಯಕ್ರಮ ಗಂಟೆ 10.30ಕ್ಕೆ ಮಹಾಪೂಜೆ ನಂತರ 11.00ಕ್ಕೆ ಸಭಾ ಕಾರ್ಯಕ್ರಮ ನಂತರ ಅನ್ನಸಂತರ್ಪಣೆ ಜರುಗಲಿರುವುದು.
ಆ ಪ್ರಯುಕ್ತ ಸಮಾಜ ಬಾಂಧವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿ, ಶ್ರೀ ಗುರುಪೂಜೆಯ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ, ಪೂಜಾ ಪ್ರಸಾದ ಸ್ವೀಕರಿಸಿ, ಗುರುವರ್ಯರ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.