ಕಲಿಕೆಯ ಜೊತೆ ದೇಶಪ್ರೇಮವನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕು: ಸೀತಾರಾಮ ಸಾಲ್ಯಾನ್
ಮೂಡುಬಿದಿರೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾಗಿರಿ ಕಡಂದಲೆ ಇಲ್ಲಿ 79ನೇ ಸ್ವಾತಂತ್ರೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸೀತಾರಾಮ ಸಾಲ್ಯಾನ್ ಅವರು ದ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯ ದಿನದ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಿದರು. ಕಲಿಕೆಯ ಜೊತೆ ದೇಶಪ್ರೇಮವನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಶಾಲೆಯ ಶಿಕ್ಷಕ ವೃಂದ ಹೆಚ್ಚಿನ ಪ್ರೋತ್ಸಾಹ ನೀಡಿದ್ದು, ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದರು.
ಅಲಂಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ಅಮಿತ್ ಡಿಸಿಲ್ವ ಅವರು ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದರ ಜೊತೆ ಸಮಾಜಮುಖಿ ಕಾರ್ಯಗಳಲ್ಲೂ ಒಲವು ತೋರಿಸಿಕೊಳ್ಳಬೇಕು. ಇಳಿವಯಸ್ಸಿನಲ್ಲೇ ನಾಯಕತ್ವ ಗುಣವನ್ನು ಅಳವಡಿಸಿಕೊಳ್ಳಬೇಕು ಎಂದರು. ಲಯನ್ಸ್ ಕ್ಲಬ್ ವತಿಯಿಂದ ಮಕ್ಕಳಿಗೆ ಸಿಹಿ ತಿಂಡಿ ಪಾನೀಯ ಹಾಗೂ ಬಹುಮಾನ ವಿತರಣೆ ಮಾಡಲಾಯಿತು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪತ್ರಕರ್ತ ಜಗದೀಶ್ ಪೂಜಾರಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ರಿಚರ್ಡ್ ಡಿಸೋಜ, ಕೋಶಾಧಿಕಾರಿ ರೊಕಿ ಮಸ್ಕರೇನ್ಹಸ್, ಸದಸ್ಯರಾದ ರಿಚರ್ಡ್ ಬರ್ಬೊಜ, ಜೋನ್ ದಾಂತಿಸ್, ಮೈಕಲ್ ಸಿಕ್ವೇರ, ಹರ್ಮನ್ ಡಿಸಿಲ್ವ, ವಿದ್ಯಾ ಮಸ್ಕರೇನ್ಹಸ್, ಮೆಲಿಟ ಬರ್ಬೊಜ, ಲವಿಟಾ ಬರ್ಬೊಜ, ಶಿಕ್ಷಕರಾದ ಸತೀಶ್ ಶೆಟ್ಟಿ, ಪೌಲಿನ್ ಪಿಂಟೊ, ಸು ಡಿಸೋಜ, ಕೋಶಾಧಿಕಾರಿ ರೊಕಿ ಮಸ್ಕರೇನ್ಹಸ್, ಸದಸ್ಯರಾದ ರಿಚರ್ಡ್ ಬರ್ಬೊಜ, ಜೋನ್ ದಾಂತಿಸ್, ಮೈಕಲ್ ಸಿಕ್ವೇರ, ಹರ್ಮನ್ ಡಿಸಿಲ್ವ, ವಿದ್ಯಾ ಮಸ್ಕರೇನ್ಹಸ್, ಮೆಲಿಟ ಬರ್ಬೊಜ, ಲವಿಟಾ ಬರ್ಬೊಜ, ಮುಖ್ಯ ಶಿಕ್ಷಕಿ ಪ್ರತಿಭಾ, ಶಿಕ್ಷಕರಾದ ಸತೀಶ್ ಶೆಟ್ಟಿ, ಪೌಲಿನ್ ಪಿಂಟೊ, ಸುಮನಾ ಎಚ್.ಎಚ್, ರಾಜೇಶ್ವರಿ, ಅಂಗನವಾಡಿ ಕಾರ್ಯಕರ್ತೆ ಬೆನೆಡಿಕ್ಟ್ ದಾಂತಿಸ್ ಮಕ್ಕಳ ಪೋಷಕರು ಉಪಸ್ಥಿತರಿದ್ದರು.