ಮುಲ್ಕಿ : ಲಯನ್ಸ್ ಕ್ಲಬ್ ಕಡೂರು ಅರಿವಿನಮನೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಡೂರು ಪಟ್ಟಣದ ಅರಿವಿನಮನೆ ರೈತ ಸಭಾಂಗಣದಲ್ಲಿ ದಿನಾಂಕ 24-07-2028 ರ ಗುರುವಾರದಂದು ನೆರವೇರಿತು.
ಲಯನ್ ಈಶ್ವರಪ್ಪ.ಕೆ.ಎಸ್ ಕ್ಲಬ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಕಾರ್ಯದರ್ಶಿಯಾಗಿ ಲ ರವಿಕುಮಾರ್, ಖಜಾಂಚಿಯಾಗಿ ಲ ಶಶಿಧರ್ ಹಾಗೂ ಸೇವಾ ಅಧ್ಯಕ್ಷರಾಗಿ ಲ ರಂಗನಾಥಸ್ವಾಮಿ ಅಧಿಕಾರ ಸ್ವೀಕರಿಸಿದರು.ಪದಗ್ರಹಣಾಧಿಕಾರಿಯಾಗಿ ಅಂತರರಾಷ್ಟ್ರೀಯ ಲಯನ್ಸ್ ಜಿಲ್ಲೆ 317-ಡಿ ಯ ಲಯನ್ ವೆಂಕಟೇಶ ಹೆಬ್ಬಾರ್ ಚೀಪ್ ಕಾರ್ಡಿನೇಟರ್ ಫಾರ್ ಗ್ಲೋಬಲ್ ಕಾಸ್ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಆದಾಯದ ಸ್ವಲ್ಪ ಭಾಗವಾದರೂ ಸಮಾಜಕ್ಕೆ ದಾನವನ್ನು ನೀಡಿದಾಗ ಮಾತ್ರ ಲಯನ್ ಸಂಸ್ಥೆಯ ಉದ್ದೇಶ ಈಡೇರುತ್ತದೆ ಸೇವಾ ಚಟುವಟಿಕೆಗೆ ಹೆಚ್ಚಿನ ಕೊಡುಗೆಯನ್ನು ನೀಡಲು ಕರೆ ನೀಡಿದರು
ಕಾರ್ಯಕ್ರಮದಲ್ಲಿ ಪ್ರಾಂತ-14 ರ ಪ್ರಾಂತ್ಯಾಧ್ಯಕ್ಷರಾದ ಲ ವೆಂಕಟೇಶ್.ಬಿ.ಎನ್ ಮತ್ತು ವಲಯ-3 ರ ವಲಯಾಧ್ಯಕ್ಷರಾದ ಲ ಸತೀಶ್ ಸಾಹುಕಾರ್, ಲ ಪ್ರತಿಭಾ ಹೆಬ್ಬಾರ್, ಲ ಗೋಪಿಕೃಷ್ಣ, ಲ ಕುಮಾರ್, ಲ ಸುರೇಶ್, ಲ ಈಶ್ವರಪ್ಪ, ಲ ಗಿರೀಶಾರಾಧ್ಯ, ಲ ಕಲ್ಲಪ್ಪ, ಲ ಕಲ್ಲೇಶ್, ಲ ಮಂಜು, ಸಮಾಜ ಸೇವಕರಾದ ನೀಲಕಂಠಪ್ಪ, ಮಲ್ಲಪ್ಪ ಭಾಗವಹಿಸಿದ್ದರು.