ಕಾರ್ಕಳ ಶ್ರೀ ಉಮಾಮಹೇಶ್ವರ ದೇವಸ್ಥಾನ ಕೈಲಾಜೆ ಅತ್ತೂರು ಇಲ್ಲಿಯ ಸುಮಾರು 200 ಮೀಟರ್ ರಸ್ತೆಗೆ ದಾನಿಗಳ ಮೂಲಕ ದಾಮರಿಕರಣ ಮಾಡಿ ಇಂದು ಉದ್ಘಾಟಿಸಲಾಯಿತು. ದೇವಸ್ಥಾನದ ಅರ್ಚಕರಾದ ಶಿವಶಂಕರ ಭಟ್ ಡಾಮರಿಕರಣಗೊಂಡ ರಸ್ತೆಯನ್ನು ಉದ್ಘಾಟಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಸಿ ಎ ಕಮಲಾಕ್ಷ ಕಾಮತ್ ಭಾಗವಹಿಸಿ ಮಾತನಾಡಿ ದೇವಸ್ಥಾನಗಳಿಗೆ ಸಂಬಂಧಪಟ್ಟ ಮೂಲಭೂತ ಅವಶ್ಯಕತೆಗಳು ದಾನಿಗಳ ಸಹಕಾರದಿಂದ ನಡೆದರೆ ಅ ಮೂಲಕ ದೇವಸ್ಥಾನವೂ ಅಭಿವೃದ್ಧಿಗೊಳ್ಳುತ್ತದೆ. ಇದರಿಂದ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತದೆ. ಭಕ್ತಿ ಶ್ರದ್ಧೆಗಳಿಂದ ಭಗವಂತನನ್ನು ಆರಾಧಿಸಿದಾಗ ಭಗವಂತ ಒಲಿದು ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂದರು.

ವೇದಿಕೆಯಲ್ಲಿ ಅರ್ಚಕರಾದ ಶಿವಶಂಕರ್ ಭಟ್ ದಾನಿಗಳಾದ ಮಂಜುನಾಥ ರಾವ್, ಸ್ಥಳೀಯರಾದ ರಾಮ ಶೆಟ್ಟಿ, ವರದರಾಯ ಪ್ರಭು, ಬಾಲಕೃಷ್ಣ ಹೆಗ್ಡೆ ಅತ್ತೂರು, ಕಂಟ್ರಾಕ್ಟರ್ ಸಾಜನ್ ಉಪಸ್ಥಿತರಿದ್ದರು
ಹರೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ದೇಣಿಗೆ ನೀಡಿದ ದಾ ನಿಗಳನ್ನು ಸನ್ಮಾನಿಸಲಾಯಿತು.

