ನವೆಂಬರ್ 30 ನೇ ಅದಿತ್ಯವಾರ ನಡೆದ ಎಲ್ಲಾ ವಿಭಾಗ ಮುಖ್ಯಸ್ತರ ಸಭೆಯಲ್ಲಿ ಆಡಳಿತ ಟ್ರಸ್ಟ್ರಿ ಗಿರೀಶ್ ಪೂಜಾರಿ ಬಸ್ರ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಘೋಷಿಸಿದರು.
ಅಧ್ಯಕ್ಷರಾಗಿ ನಿತ್ಯಾನಂದ ಪೂಜಾರಿ ಬಸ್ರಾ, ಕಾರ್ಯದರ್ಶಿಯಾಗಿ ಸುನಿಲ್ ಅಮ್ಮಾಡಿ ಆಯ್ಕೆಯಾದರು. ಸದಸ್ಯರಾಗಿ ವಿವಿಧ ವಿಭಾಗಗಳಾದ ಅಂಡೆಪುಣಿ ವಿಭಾಗದಿಂದ ಪರಮೇಶ್ವರ, ಕೋಡಿಯಾಡಿಯಿಂದ ರುಕ್ಮಯ್ಯ,ನೆಕ್ಕಲಾರು ವಿಭಾಗದಿಂದ ಹರ್ಷಕಿರಣ್, ಬಲ್ಕಟ ವಿಭಾಗದಿಂದ ಆನಂದ,ಕುಂಜಾರ್ ವಿಭಾಗದಿಂದ ಮೋಹನ್ ನೆಲ್ಯಾಡಿ, ಕಡೇಶಿವಾಲಯ ವಿಭಾಗದಿಂದ ಕೇಶವ, ಹೆಗ್ಗದೆ ವಿಭಾಗದಿಂದ ಚಂದ್ರ, ಮೂಡಿಗೆರೆ ವಿಭಾಗದಿಂದ ಪ್ರದೀಪ್, ಅರೆಹಳ್ಳಿ ಬೇಲೂರುದಿಂದ ಗಿರೀಶ್, ಸರಪಾಡಿ, ಶಂಭೂರು ವಿಭಾಗದಿಂದ ಸಚಿನ್, ಕೈಂತಿಲ ವಿಭಾಗದಿಂದ ರಕ್ಷಿತ್ ಮತ್ತು ಮೋನಪ್ಪ,ಸಕಲೇಶಪುರದಿಂದ ಪ್ರೇಮ್ ಕುಮಾರ್, ಬೆಳ್ಳಿಪಾಡಿಯಿಂದ ಮಾಯಿ ಲಪ್ಪ ಪೂಜಾರಿ, ಪಾಂಗ್ಲಾಹಿ ಪುತ್ತೂರು ನಿಂದ ಫ್ರೇಮ್ ರಾಜ್, ಬಾಳುಪೇಟೆ ವಿಭಾಗದಿಂದ ವಿಶ್ವನಾಥ, ಪುರುಷರಕಟ್ಟೆ ವಿಭಾಗದಿಂದ ಪ್ರಮೋದ್ ರವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ರಿಗಳಾದ ಶಾಂತಪ್ಪ ಪೂಜಾರಿ ಅಂಡೆಪುಣಿ, ಜಯಪ್ರಕಾಶ್ ಅಮ್ಮಾಡಿ, ಗಣೇಶ್ ಕುಮಾರ್ ನೆಕ್ಕಿ ತಪುಣಿ, ಪ್ರಧಾನ ಸಂಚಾಲಕರಾದ ಗಿರಿಯಪ್ಪ ಪೂಜಾರಿ, ಕುಟುಂಬದ ಹಿರಿಯಾರಾದ ಮಾಯಿಲಪ್ಪ ಪೂಜಾರಿ, ಅಣ್ಣಿ ಪೂಜಾರಿ, ದೇವಪ್ಪ ಪೂಜಾರಿ ಮಹಿಳಾ ಸಮಿತಿಯ ಅಧ್ಯಕ್ಷೆ ವಿಶಾಲಾಕ್ಷಿ ಬೇಲೂರು, ಜೊತೆ ಕಾರ್ಯದರ್ಶಿ ಜಲಜಾ ಹಾಗೂ ಮಹಿಳಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಶ್ರೀಧರ್ ಕುಂಜಾರ್ ಕಾರ್ಯಕ್ರಮ ನಿರೂಪಿಸಿದರು.

