ಕಲ ನರಸಿಂಹುಲು ಚೆಟ್ಟಿ ಒಂದು ನೆನಪು ಸ್ಮರಣಿಕೆ ಬಿಡುಗಡೆ

0
113


ಬೆಂಗಳೂರು: ಆಕರ್ಷಕ ವ್ಯಕ್ತಿತ್ವದ ಸಕಲ ನರಸಿಂಹಲು ಚೆಟ್ಟಿ ಅವರು 97 ವರ್ಷದ ಸಾರ್ಥಕ ಜೀವನವನ್ನು ಪೂರೈಸಿದ್ದು, ಅವರ ಬದುಕಿನ ಕುರಿತು ಪ್ರಕಟಿಸಲಾದ ಸ್ಮರಣಿಕೆಯನ್ನು ಚಿನ್ಮಯ ಮಿಷನ್‌ ಪೂಜ್ಯ ಸ್ವಾಮಿ ಬ್ರಹ್ಮಾನಂದಜೀ ಅವರು ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ಬಿಡುಗಡೆ ಮಾಡಿದರು.
ವ್ಯಾಪಾರ ವೃತ್ತಿಯಲ್ಲಿ ಮಾತ್ರವಲ್ಲದೆ, ಅವರು ನಿಜವಾದ ಕರ್ಮಯೋಗಿ, ತತ್ವ ಜ್ಞಾನಿ, ಮಾರ್ಗದರ್ಶಕ, ಗುರು ಹಾಗೂ ಮಾನವೀಯ ಮೌಲ್ಯಗಳನ್ನು ಪಾಲಿಸಿದ ಒಬ್ಬ ಶ್ರೇಷ್ಠ ವ್ಯಕ್ತಿಯಾಗಿದ್ದರು. ಪೂಜ್ಯ ಸ್ವಾಮಿ ಬ್ರಹ್ಮಾನಂದಜೀ ಅವರು ಪುಸ್ತಕ ಬಿಡುಗಡೆ ಮಾಡಿ ಮಾತ ನಾಡಿ, ಶ್ರೀ ಚೆಟ್ಟಿ ಅವರು ನಿಜವಾದ ಯೋಗಿಯಾಗಿದ್ದರು. ಶಾಸ್ತ್ರಗಳ ತತ್ತ್ವ ಜ್ಞಾನವನ್ನು ಅವರು ತಮ್ಮ ನಿತ್ಯ ಜೀವನದಲ್ಲಿ ಚಿಂತನೆ, ಮಾತು ಹಾಗೂ ಕೃತ್ಯಗಳಲ್ಲಿ ಅಳವಡಿಸಿಕೊಂಡವರು. ಅವರನ್ನು ಚಿನ್ಮಯ ಮಿಷನ್‌ ಭೀಷ್ಮ ಪಿತಾಮಹ ಎಂದು ಗೌರವದಿಂದ ಕರೆಯ ಲಾಗುತ್ತಿತ್ತು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕುದುರೆ ಮುಖ ಕಬ್ಬಿಣ ಮತ್ತು ಅದಿರು ಕಂಪನಿ ಲಿಮಿಟೆಡ್ ನ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕರಾದ ಎ. ಕೃಷ್ಣಮೂರ್ತಿ, ಮತ್ತು ಆರ್ಯ ವೈಶ್ಯ ಮಹಾಸಭಾದ ಅಧ್ಯಕ್ಷರಾದ ಆ‌ರ್. ಪಿ.ರವಿಶಂಕರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here