ಕಲಾ ಸಂಪದ ಪುಸ್ತಕ ಬಿಡುಗಡೆ ಕಾರ್ಯಕ್ರಮ

0
160

ರಾಜೇಶ್ವರಿ ಕುಡುಪು ಇವರು ರಚಿಸಿರುವ ಕಲಾ ಸಂಪದ  ಪುಸ್ತಕ ಬಿಡುಗಡೆ ಕಾರ್ಯಕ್ರಮ
(
ಎಂಟನೇಯ ತರಗತಿ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ ಮಾರ್ಗದರ್ಶಿ ಪುಸ್ತಕ)

ಮಂಗಳೂರಿನ ಪತ್ರಿಕಾ ಭವನದಲ್ಲಿ “ಕಲಾಸಂಪದ” ಪುಸ್ತಕವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಉತ್ತರ ವಲಯ ಮಂಗಳೂರಿನ ಶ್ರೀ ಜೇಮ್ಸ್  ಕುಟಿನ್ಹ ಬಿಡುಗಡೆ ಮಾಡಿದರು.

ಶ್ರೀಮತಿ ರಾಜೇಶ್ವರಿ ಕುಡುಪು ಇವರು ಮಂಗಳೂರಿನ ಕೆನರಾ ಪ್ರೌಢಶಾಲೆಯಲ್ಲಿ 32 ವರ್ಷಗಳ ಕಾಲ  ಚಿತ್ರಕಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಇವರು ಈಗಾಗಲೇ ಎಂಟನೇ ತರಗತಿ ಹಾಗೂ ಒಂಬತ್ತನೆಯ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ ಮಾರ್ಗದರ್ಶಿ “ಕಲಾ ಸಂಪದ” ಪುಸ್ತಕವನ್ನು ರಚಿಸಿದ್ದಾರೆ. ಈ ಕಲಾಸಂಪದ ಪುಸ್ತಕವು ಶಿಕ್ಷಣ ಇಲಾಖೆಯಿಂದ ಹಿಡಿದು ರಾಜ್ಯಮಟ್ಟದವರೆಗೂ ಎಲ್ಲರಿಂದಲೂ ಮೆಚ್ಚುಗೆ ಪಡೆದಿದೆ ಎಂದು ಹೇಳಲು ಸಂತೋಷವಾಗುತ್ತದೆ. ರಾಜೇಶ್ವರಿ ಕುಡುಪು ಇವರು ಮಂಗಳೂರು ಉತ್ತರ ವಲಯ ಚಿತ್ರಕಲಾ ಸಂಘದ ಅಧ್ಯಕ್ಷರಾಗಿ, ಡಯಟು ಮಂಗಳೂರಿನ ಚಿತ್ರಕಲಾ ಗ್ರೇಡ್ ಪರೀಕ್ಷೆಯ  ಅಧೀಕ್ಷಕರಾಗಿ, ದಾವಣಗೆರೆ ಚಿತ್ರಕಲಾ ಗ್ರೇಡ್ ಪರೀಕ್ಷೆಯ ಮೌಲ್ಯಮಾಪನ ಕೇಂದ್ರದಲ್ಲಿ ಡಿ ಸಿ ಯಾಗಿ ಕಾರ್ಯನಿರ್ವಹಿಸುತ್ತಾಇದ್ದಾರೆ.

ಮಾರ್ಗದರ್ಶಿ ಪುಸ್ತಕದಿಂದ ಮಕ್ಕಳು ಪಡೆದ ಪ್ರಯೋಜನದಿಂದ ಇನ್ನಷ್ಟು ಪ್ರೇರಿತರಾಗಿ ಇದೀಗ ಅವರು ರಚನಾ ಕೌಶಲ್ಯ ಕ್ರಿಯಾಶೀಲತೆ ಮತ್ತು ಸೃಜನಶೀಲತೆ ಇಂತಹ ಕಲೆಯನ್ನು ಇನ್ನು ಹೆಚ್ಚು ವಿದ್ಯಾರ್ಥಿಗಳನ್ನು ತಲುಪಬೇಕು ಎನ್ನುವ ಉದ್ದೇಶದಿಂದ ಇವರು ಎಂಟನೇಯ ತರಗತಿ ವಿದ್ಯಾರ್ಥಿಗಳಿಗಾಗಿ ಕಲಾಸಂಪದ ಎನ್ನುವ ಪುಸ್ತಕವನ್ನು ರಚನೆ ಮಾಡಿ ಎರಡನೆಯ ಆವೃತ್ತಿಯನ್ನು ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದೊಂದಿಗೆ ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ.

ಈ ಕಲಾಸಂಪದ ಪುಸ್ತಕವು ಎಂಟನೇಯ ತರಗತಿಯ ಮಕ್ಕಳಿಗೆ ಮಾರ್ಗದರ್ಶನವಾಗಿ ವಿದ್ಯಾರ್ಥಿಗಳಿಗೆ ಪ್ರೇರಣೆಯಗಲಿ ಎಂಬುದು ಅವರ ಆಶಯ ಹಾಗೂ ಗ್ರೇಡ್ ಪರೀಕ್ಷೆಗೆ ಹಾಜರಿರುವ ಮಕ್ಕಳಿಗೂ ಕೂಡ ಉಪಯುಕ್ತವಾಗಿದೆ. ಇದನ್ನು  ಶಿಕ್ಷಣ ಇಲಾಖೆಯ ಚಿತ್ರಕಲಾ ಶಿಕ್ಷಕರ ಕೈಪಿಡಿ, ಚಿತ್ರಕಲಾ ಸಿಂಚನ ಇವೆಲ್ಲದರ ಮಾರ್ಗದರ್ಶನದಲ್ಲಿ ಹಾಗೂ ಅದೇ ಮಾದರಿಯಲ್ಲಿ ಈ ಪುಸ್ತಕವನ್ನು ರಚನೆ ಮಾಡಿದ್ದಾರೆ.

ಈ  ಕಲಾಸಂಪದ ಪುಸ್ತಕ ರಚನೆಗಾಗಿ ಅವರ ಪತಿ ಶ್ರೀ ಕೆ ರಮಾನಂದ ರಾವ್ ರವರ  ಹಾಗೂ ಕೆನರಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಅರುಣಕುಮಾರಿಯವರ ಪ್ರೋತ್ಸಾಹವಿದೆ. ಈ ಪುಸ್ತಕ ರಚನೆಯಲ್ಲಿ ರಾಜೇಶ್ವರಿ ಕೆ ಅವರ ಸಹೋದರ ವಸಂತ ಕೇದಿಗೆ ಅವರ ಪಾತ್ರ ಹಿರಿದಾದುದು. ಅವರ ಪ್ರೋತ್ಸಾಹ ಮತ್ತು ಸಹಕಾರಕ್ಕೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ. ಈ ಮಾರ್ಗದರ್ಶಿ ಪುಸ್ತಕವನ್ನು ಇಂಗ್ಲಿಷ್ ನಲ್ಲಿ ಬರೆಯಲು ಸಹಕರಿಸಿದ ಶ್ರೀಮತಿ ಶೀತಲ್ ಶೆಣ್ಯೆ, ಪ್ರಾಥಮಿಕ ಶಾಲಾ ಶಿಕ್ಷಕಿ ಇವರಿಗೆ ಅಭಿನಂದನೆಗಳು.

 ರಾಜೇಶ್ವರಿ ಕೆ. ಕೆನರಾ ಹೈಸ್ಕೂಲ್ ಚಿತ್ರಕಲಾ ಶಿಕ್ಷಕಿಯವರು ಕಲೆಯ ಮೂಲಕ ತನ್ನ ಶಾಲೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಇತರ ಶಾಲೆಗಳ ಗೋಡೆ ಮತ್ತು ಆವರಣದ ಅಂದವನ್ನು ಹೆಚ್ಚಿಸುವಲ್ಲಿಯೂ ಶ್ರಮಿಸಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಮತಗಟ್ಟೆ ಸೌಂದರೀಕರಣಕ್ಕೆ ಸಂಬoಧಿಸಿದ ವಿವಿಧ ಶಾಲೆಗಳನ್ನು ಸೌಂದರೀಕರಣಗೊಳಿಸುವಲ್ಲಿ ತನ್ನ ಕೈಚಳಕವನ್ನು ತೋರಿಸಿದ್ದಾರೆ. ಕಲಾಸಂಪದ ಪುಸ್ತಕದಿಂದ ಮಕ್ಕಳಿಗೆ ಚಿತ್ರಕಲೆಯ ಬಗ್ಗೆ ಇನ್ನಷ್ಟು ಉತ್ಸಾಹ ಒಲವು ಆಸಕ್ತಿ ಮೂಡಲಿ ಹಾಗೂ ಎಲ್ಲಾ ಮಕ್ಕಳು ಇದರ ಪ್ರಯೋಜನ ಪಡೆಯುವಂತಾಗಲಿ.

ರಾಜೇಶ್ವರಿ ಕೆ ಇವರು ಪಠ್ಯೇತರ ಚಟುವಟಿಕೆಯಲ್ಲಿ ಶಾಲಾ ವಿಧ್ಯಾರ್ಥಿಗಳು ಭಾಗವಹಿಸಲು ಪ್ರೋತ್ಸಾಹ ನೀಡಿರುತ್ತಾರೆ. ಪ್ರತಿ  ವರ್ಷ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗಾಗಿ ಚಿತ್ರಕಲೆ, ಪೇಪರ್ ಕ್ರಾಫ್ಟ್, ಡಾಲ್ ಮೇಕಿಂಗ್, ಗ್ಲಾಸ್ ಪೇಂಟ್, ಫ್ಯಾಬ್ರಿಕ್ ಪೇಯಿಂಟ್, ಮುಖವಾಡ ರಚನೆ, ಆವೆ ಮಣ್ಣಿನ ಕಲಾಕೃತಿ ಇತ್ಯಾದಿಗಳನ್ನು ಕಲಿಸಿರುತ್ತಾರೆ. ಪರಿಸರದ ಮೂಲಕ ಮಕ್ಕಳ ಜ್ಞಾನಾಭಿವೃದ್ಧಿಗೆ ಕಾರ್ಯಗಾರ / ತರಬೇತಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆದ ಕಲಾಸಂಪದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಉತ್ತರ ವಲಯ ಮಂಗಳೂರಿನ ಶ್ರೀ ಜೇಮ್ಸ್  ಕುಟಿನ್ಹ, ಶ್ರೀಮತಿ ರಾಜೇಶ್ವರಿ ಕೆ., ಕೆನರಾ ಹೈಸ್ಕೂಲ್ ಸಂಚಾಲಕರಾದ ಅಶ್ವಿನಿ ಕಾಮತ್, ಶ್ರೀಮತಿ ಅರುಣಾಕುಮಾರಿ ಸಿ. ಮುಖ್ಯ ಶಿಕ್ಷಕರು, ಕೆನರಾ ಪ್ರೌಢಶಾಲೆ, ಡೊಂಗರಕೇರಿ ಮಂಗಳೂರು, ಹಿರಿಯ ಕಲಾವಿದರಾದ ಪೆರ್ಮುದೆ ಶ್ರೀ ಮೋಹನ್ ಕುಮಾರ್, ಶ್ರೀ ವಸಂತ ಕೇದಿಗೆ ಹಾಗೂ ರಾಜೇಂದ್ರ ಕೇದಿಗೆ ಇವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here