ದಾವಣಗೆರೆ:ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ದಾವಣಗೆರೆಯ ಖ್ಯಾತ ಹೋಟೆಲ್ ಉದ್ಯಮಿ, ಸಮಾಜ ಸೇವಕರಾದ ಅಣಬೇರು ರಾಜಣ್ಣನವರಿಗೆ ಇತ್ತೀಚಿಗೆ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಅವರ 80ನೇ ವರ್ಷದ ಜನಮದಿನದ ಸಂಭ್ರಮಕ್ಕೆ ಸನ್ಮಾನಿಸಿ ಗೌರವಿಸಲಾಯಿತು ಎಂದು ಕಲಾಕುಂಚ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ರಾಜಣ್ಣನವರು ಕಳೆದ 6 ದಶಮಾನದಿಂದ ನಿರಂತರವಾಗಿ ಸಾಮಾಜಿಕ ಕಾಳಜಿಯೊಂದಿಗೆ ಹೋಟೆಲ್ ಉದ್ಯಮದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ನಿಸ್ವಾರ್ಥವಾಗಿ ಯಾವುದೇ ಪ್ರಚಾರವಿಲ್ಲದೇ ಕರ್ತವ್ಯ ನಿಷ್ಠೆಯಿಂದ ಕಾಯಕ ಮಾಡುತ್ತಿದ್ದು ಅವರಿಗೆ ಕಲಾಕುಂಚದಿಂದ ಅಭಿಮಾನದಿಂದ
ಅಭಿನಂದಿಸಲಾಯಿತು.
ಕಲಾಕುಂಚ ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಕಲಾಕುಂಚ ಡಿ.ಸಿ.ಎಂ.ಟೌನ್‌ಶಿಪ್ ಶಾಖೆಯ ಅಧ್ಯಕ್ಷರಾದ ಶಾರದಮ್ಮ ಶಿವನಪ್ಪ ದಂಪತಿಗಳು, ಕಲಾಕುಂಚ ಎಂ.ಸಿ.ಸಿ. ಬ್ಲಾಕ್ ಶಾಖೆಯ ಅಧ್ಯಕ್ಷರಾದ ಪ್ರಭಾ ರವೀಂದ್ರ, ಕಲಾಕುಂಚ ಕೆ.ಬಿ.ಬಡಾವಣೆ ಶಾಖೆಯ ಅಧ್ಯಕ್ಷರಾದ ವಿ.ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.