ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಸಂಕ್ರಾಂತಿ ಪ್ರಯುಕ್ತ ರಾಜ್ಯ ಮಟ್ಟದ ಉಚಿತ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ದಿನಾಂಕ 11-01-2026 ರಂದು ಭಾನುವಾರ ಬೆಳಿಗ್ಗೆ ದಾವಣಗೆರೆಯ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ನಡೆಯುವ ಈ ಕವಿಗೋಷ್ಠಿಯಲ್ಲಿ ಭಾಗವಹಿಸುವವರು 21-12-2025 ರೊಳಗೆ ಈ ಕೆಳಗಿನ ವ್ಯಾಟ್ಸಪ್ ಸಂಖ್ಯೆಗೆ ಹೆಸರು ನೊಂದಾಯಿಸಬಹುದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.
ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸುವವರಿಗೆ ಅಭಿನಂದನಾ ಪತ್ರ, ಕನ್ನಡತಾಯಿ ಭುವನೇಶ್ವರಿಯ ಸ್ಮರಣಿಕೆ ಹಾಗೂ ಕಾವ್ಯಕುಂಚ ೫ನೇ ಭಾಗದ ಕವನ ಸಂಕಲನ ವೇದಿಕೆಯಲ್ಲಿ ವಿತರಿಸಲಾಗುವುದು. ಹೆಸರು ನೊಂದಾಯಿಸುವ ವ್ಯಾಟ್ಸಪ್ ಸಂಖ್ಯೆ ಶ್ರೀಮತಿ ಮಂಜುಳಾ ಪ್ರಸಾದ್ ಬಂಗೇರ 9743377517
