ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಯುಗಾದಿ ಹಬ್ಬದ ಪ್ರಯುಕ್ತ ರಾಜ್ಯ ಮಟ್ಟದ ಉಚಿತ ಕವನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಯಾವುದೇ ವಯೋಮಾನದ ಮಿತಿ ಇಲ್ಲದೇ ಯುಗಾದಿ ಬಗ್ಗೆ ಕವನ ರಚಿಸಿ ಈ ಕೆಳಗಿನ ವ್ಯಾಟ್ಸಪ್ ಸಂಖ್ಯೆಗೆ 15-03-2026 ರೊಳಗೆ ಕವನ ಕಳಿಸಬೇಕಾಗಿದೆ ಎಂದು ತೀರ್ಪುಗಾರರೊಲ್ಲಬ್ಬರಾದ ಶ್ರೀಮತಿ ಕೋಮಲಾ ವಸಂತಕುಮಾರ್ ಪ್ರಕಟಿಸಿದ್ದಾರೆ.
ಯಾವುದೇ ಸಭೆ, ಸಮಾರಂಭಗಳಿಲ್ಲದೇ ಸ್ಪರ್ಧಿಗಳಲ್ಲಿ ವಿಜೇತರಾದವರ ಅವರವರ ವ್ಯಾಟ್ಸಪ್ ಸಂಖ್ಯೆಗೆ ಫಲಿತಾಂಶ ಅಭಿನಂದನಾ ಪತ್ರ ಕಳಿಸಲಾಗುವುದು. ಉಚಿತ ಕವನ ಸ್ಪರ್ಧೆಯಲ್ಲಿ ಭಾಗವಹಿಸಿದವರು ತಮ್ಮ ಕವನ ಪೂರ್ಣ ಪ್ರಮಾಣದ ಹೆಸರು ವಿಳಾಸ ವ್ಯಾಟ್ಸಪ್ ಸಂಖ್ಯೆಯನ್ನು 8884131815 ಈ ವ್ಯಾಟ್ಸಪ್ ಸಂಖ್ಯೆಗೆ ಕಳಿಸಬೇಕಾಗಿ ಕಲಾಕುಂಚ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.

