ದಾವಣಗೆರೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಪ್ರಯುಕ್ತ ಆಗಸ್ಟ್ 10 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ದಾವಣಗೆರೆಯ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ರಾಜ್ಯ ಮಟ್ಟದ ಉಚಿತ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಕವಿಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಕನ್ನಡ ತಾಯಿ ಭುವನೇಶ್ವರಿ ಸ್ಮರಣಿಕೆ ಅವರ ಹೆಸರಿನಲ್ಲಿ ಅಭಿನಂದನಾ ಪತ್ರ ಕಾವ್ಯಕುಂಚ ಭಾಗ-5 ಕವನ ಸಂಕಲನ ವಿತರಿಸಲಾಗುವುದು ಎಂದು ಈ ಕವಿಗೋಷ್ಟಿಯ ನೇತೃತ್ವ ವಹಿಸಿಕೊಂಡ ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರು, ಹಿರಿಯ ಕವಯತ್ರಿಯರಾದ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಪ್ರಕಟಸಿದ್ದಾರೆ.
ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಶ್ರಾವಣದ ಕುರಿತು ಕವನ ವಾಚನ ಮಾಡಿ ಭಾಗವಹಿಸುವವರು 9743897578 ಈ ವ್ಯಾಟ್ಸಪ್ ಸಂಖ್ಯೆಗೆ 31-7-2025 ರೊಳಗೆ ಹೆಸರು ನೊಂದಾಯಿಸಬೇಕು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ, ಕಿರಿಯ ಕವಿ, ಕವಯತ್ರಿಯರು ಆಗಮಿಸಿ ಈ ಮುಕ್ತವಾದ ವೇದಿಕೆ ಅವಕಾಶ ಸದ್ಭಳಕೆ ಮಾಡಿಕೊಳ್ಳಬೇಕಾಗಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.