ಶ್ರೀ ಗಣೇಶೋತ್ಸವದ ಪರವಾಗಿ ಕಲಾಕುಂಚದಿಂದ ರಾಜ್ಯ ಮಟ್ಟದ ಉಚಿತ “ಅಂಚೆ-ಕುAಚ” ಸ್ಪರ್ಧೆಗೆ ಆಹ್ವಾನ

0
17

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಶ್ರೀ ಗಣೇಶೋತ್ಸವದ ಪ್ರಯುಕ್ತ ರಾಜ್ಯ ಮಟ್ಟದ ಉಚಿತ ಚಿತ್ರ ಬರೆಯುವ “ಅಂಚೆ-ಕುAಚ” ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
50 ಪೈಸೆ ಅಂಚೆ ಕಾರ್ಡ್ನಲ್ಲಿ ಶ್ರೀ ಗಣಪತಿ ಚಿತ್ರ ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕನ್ನಡದಲ್ಲಿ ಹೆಸರು, ವಿಳಾಸ, ವಯಸ್ಸು, ವ್ಯಾಟ್ಸಪ್ ನಂಬರ್‌ಗಳೊAದಿಗೆ 31-8-2025 ರೊಳಗೆ ಕಳಿಸಬೇಕು ಎಂದು ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ಪ್ರಕಟಿಸಿದ್ದಾರೆ. ವಯೋಮಾನದ ಮಿತಿಯೊಂದಿಗೆ ವಿವಿಧ ವಿಭಾಗಗಳಾಗಿ ವಿಂಗಡಿಸಿ ಯಾವುದೇ ಸಭೆ, ಸಮಾರಂಭವಿಲ್ಲದೇ ಸ್ಪರ್ಧಿಗಳು ಕೊಟ್ಟ ವ್ಯಾಟ್ಸಪ್ ಸಂಖ್ಯೆಗೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಫಲಿತಾಂಶ, ಅಭಿನಂದನಾ ಪತ್ರ ಕಳಿಸುತ್ತೇವೆ. ಆಂಗ್ಲೆ ಭಾಷೆಯಲ್ಲಿ ವಿಳಾಸ ಕಳಿಸಿದರೆ ಸ್ವೀಕರಿಸುವುದಿಲ್ಲ.
ಅಂಚೆ ಕಾರ್ಡಿನಲ್ಲಿ ಚಿತ್ರ ಬರೆದು ಕಳಿಸುವ ವಿಳಾಸ ಕಲಾಕುಂಚ `ಕನ್ನಡ ಕೃಪ’, # 588, ಮೊದಲನೇ ಮಹಡಿ, ಕುವೆಂಪು ರಸ್ತೆ, ಕಸ್ತೂರ್ಬಾ ಬಡಾವಣೆ, ದಾವಣಗೆರೆ – 577002. ಹೆಚ್ಚಿನ ಮಾಹಿತಿಗೆ ಮೊ. 9538732777, 9945785170 ಈ ಸನೀಹವಾಣಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here