ಕಲಾಕುಂಚ ರಾಜ್ಯ ಮಟ್ಟದ ಉಚಿತ ಕವನ ಸ್ಪರ್ಧೆ ಫಲಿತಾಂಶ

0
36

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ 70ನೇ ವರ್ಷದ ಕರ್ನಾಟಕÀ ರಾಜ್ಯೋತ್ಸವದ ಪ್ರಯುಕ್ತ ರಾಜ್ಯ ಮಟ್ಟದ ಉಚಿತ ಕವನ ಬರೆಯುವ ಸ್ಪರ್ಧೆ ಹಮ್ಮಿಕೊಂಡಿದ್ದು ಅದರ ಫಲಿತಾಂಶ ಈ ಕೆಳಗಿನಂತಿದೆ ಎಂದು ತೀರ್ಪುಗಾರರಲ್ಲಿ ಒಬ್ಬರಾದ ಸಾಹಿತಿ, ಕವಯತ್ರಿ ಶ್ರೀಮತಿ ಕೋಮಲ ವಸಂಕುಮಾರ್ ತಿಳಿಸಿದ್ದಾರೆ.
ಪ್ರಥಮ ಬಹುಮಾನಗಳು ಶಿವಮೊಗ್ಗ ವಾಗೀಶ್ ಆರಾಧ್ಯ ಮಠ, ಬೆಂಗಳೂರಿನ ಶ್ರೀಮತಿ ಸೀತಾ ವ್ಯಾಸಮುದ್ರಿ, ದ್ವಿತೀಯ ಬಹುಮಾನಗಳು ಕೇರಳ ರಾಜ್ಯದ ಕಾರಸಗೋಡು ಜಿಲ್ಲೆಯ ಶ್ರೀಮತಿ ಲತಾ ಧನು ಆಚಾರ್ಯ, ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀಮತಿ ಸುಲೋಚನಾ ಜಿ. ತೃತೀಯ ಬಹುಮಾನಗಳು ಕೆಮ್ಮಣ್ಣನಿಟ್ಟಿಯ ಸುರೇಶ್ ನಿಟ್ಟಿ, ಶಿವಮೊಗ್ಗದ ಶ್ರೀಮತಿ ಸುಜಾತ ಎಂ.ಗೌಡ ಕಚವಿ.
ಸಮಾಧಾನಕರ ಬಹುಮಾನಗಳು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ದೇವಲ್ಲಿ ಸಾಂತಾಗಲ್‌ನ ವಿನಾಯಕ ರಮೇಶ್ ನಾಯ್ಕ, ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳ ಮಂಗಲ್ಪಾಡಿಯ ಶ್ರೀಮತಿ ಜಯಲಕ್ಷಿö್ಮÃ ರಾಮಚಂದ್ರ ಹೊಳ್ಳ, ಬೆಳಗಾವಿ ಜಿಲ್ಲೆಯ ರಾಯದುರ್ಗದ ಪ್ರಕಾಶ್ ಜಾಲಿಬೇರಿ, ವಿಜಯಪುರದ ಶ್ರೀಮತಿ ಕೆ.ಸುನಂದ, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ದಿನೇಶ್ ಎನ್. ಅಮ್ಮಿನಹಳ್ಳಿ, ಬೆಳಗಾವಿ ಜಿಲ್ಲೆಯ ರಾಯಬಾಗದ ಅಪ್ಪ ಸಾಹೇಬ ವಿ.ಸುತಾರ, ಬೆಂಗಳೂರಿನ ಎಂ.ಸೂರ್ಯಪ್ರಕಾಶ್, ಹುಬ್ಬಳ್ಳಿಯ ಶ್ರೀಮತಿ ಪದ್ಮಾ ಜಯತೀರ್ಥ ಉಮರ್ಜಿ, ವಿಟ್ಲಾದ ಶ್ರೀಮತಿ ಶೋಭಾ ಪಿ, ಹಳಿಯಾಳದ ಪೂನಂ ಧಾರವಾಡಕರ ಪಡೆದಿರುತ್ತಾರೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಿಸಿದ್ದಾರೆ.
ಸ್ಪರ್ಧೆಯ ನಿಯಮದಂತೆ ಯಾವುದೇ ಸಭೆ, ಸಮಾರಂಭ ಇಲ್ಲದೇ ಬಹುಮಾನ ವಿಜೇತರ ವ್ಯಾಟ್ಸಪ್‌ಗೆ ಅವರವರ ಫಲಿತಾಂಶ ಅಭಿನಂದನಾ ಪತ್ರ ಕಳಿಸಲಾಗುವುದು. ಬಹುಮಾನ ವಿಜೇತರಾದ ಸರ್ವ ಸಾಹಿತ್ಯಾ ಸಾಧಕರಿಗೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here