ಶಿವ ಸೇವಾ ವೃಂದ ಕಿದೂರು ಇವರ ಸಹಾಯ ಸಹಕಾರದೊಂದಿಗೆ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ (ರಿ)ಕೊಂಡೆವೂರು ಮತ್ತು ಒನ್ ಸೈಟ್ ಎಸ್ಸಿಲೋರ್ ಲಕ್ಷೊಟಿಕ ಫೌಂಡೇಶನ್ ಬೆಂಗಳೂರು , ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಮಂಗಳೂರು ಡಾ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್(ರಿ) ಇದರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ , ಶ್ರೀ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ತಲಪಾಡಿ, ಮಂಗಳೂರು ಇದರ ಸಹಯೋಗದಲ್ಲಿ ಉಚಿತ ಆಯುರ್ವೇದ ಶಿಬಿರವು ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ ಕಳತ್ತೂರಿನಲ್ಲಿ ಜರಗಿತು.
ಕಾರ್ಯಕ್ರಮವನ್ನು ಡಾ . ಪ್ರೇಮ್ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಶಿವ ಸೇವಾ ವೃಂದದ ಅಧ್ಯಕ್ಷರಾದ ಸದಾಶಿವ ರೈ ಕಿದೂರು ಮೇಗಿನ ಮನೆ ವಹಿಸಿದರು.ವೇದಿಕೆಯಲ್ಲಿ ಡಾ.ಶಶಾಂಕ್, ಡಾ .ಸುಶ್ಮಿತಾ, ಡಾ .ಗೋಪಿನಾಥನ್, ಶ್ರೀ ಪಿ. ಆರ್.ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಬಾಲಕೃಷ್ಣ ಆಚಾರ್ಯ ಪುತ್ತಿಗೆ, ವಾರ್ಡು ಸದಸ್ಯೆ ಶ್ರೀಮತಿ ಪುಷ್ಪಲತಾ ಪಿ.ಶೆಟ್ಟಿ, ಗಂಗಾಧರ ಕೊಂಡೆವೂರು ಮತ್ತು ಕ್ಯಾಂಪ್ ಕೋರ್ಡಿನೇಟರ್ ಸಯ್ಯದ್ ಉಪಸ್ಥಿತರಿದ್ದರು. ಅಶೋಕ ಪುಣಿಯೂರು ಕಾರ್ಯಕ್ರಮ ನಿರೂಪಿಸಿದರು.ಮಹೇಶ್ ಪುಣಿಯೂರು ಸ್ವಾಗತಿಸಿ ಭರತ್ ರಾಜ್ ಧನ್ಯವಾದ ಸಮರ್ಪಿಸಿದರು .ಮುನ್ನೂರಕಿಂತಲೂ ಹೆಚ್ಚು ಜನ ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದರು.