ವರದಿ ರಾಯಿ ರಾಜ ಕುಮಾರ
ಮೂಡಬಿದಿರೆ ಸಮೀಪದ ಕಲ್ಲಬೆಟ್ಟಿನ ಸಾರ್ವಜನಿಕ ಸತ್ಯಗಳನ್ನು ಪೂಜಾ ಸಮಿತಿಯ ವತಿಯಿಂದ 58ನೇ ವರ್ಷದ ಕಾರ್ಯಕ್ರಮ ಜರಗಿತು. ಗುರುಪುರ ಜಂಗಮ ಮಠದ ರುದ್ರಮುನಿ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಸಂಸ್ಕೃತವನ್ನು ಉಳಿಸಿ ಬೆಳೆಸಲು ಕರೆಕೊಟ್ಟರು. ಜನರಲ್ಲಿ ಪ್ರೀತಿ ವಿಶ್ವಾಸ ಹೆಚ್ಚಿ ನೆಮ್ಮದಿಯ ಬದುಕು ಲಭಿಸಲಿ ಎಂದು ಆಶಿಸಿದರು.
ವೈಬ್ರೆಂಟ್ ಪಿಯು ಪ್ರಾಂಶುಪಾಲ ಡಾ. ಎಸ್ ಎನ್ ವೆಂಕಟೇಶ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಕೆ ರಮೇಶ್ ರೈ ತೆಂಕಬೆಟ್ಟು ಗುತ್ತು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಪಾಲ್ ಕೋಟ್ಯಾನ್ ಮಾರೂರನ್ನು ಸನ್ಮಾನಿಸಲಾಯಿತು. ಪಿಯು ಹಾಗೂ ಮೆಟ್ರಿಕ್ ನಲ್ಲಿ ಅತಿ ಹೆಚ್ಚು ಅಂಕಗಳಿಸಿದ ತ್ರಿಶಾ, ಸತೀಶ್, ಸುಮಾ, ಪ್ರಮುಖ್ ರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಹೊಸಂಗಡಿ ಅರಮನೆ ಸುಕುಮಾರ ಶೆಟ್ಟಿ, ಹಾಜರಿದ್ದರು. ಸಮಿತಿಯ ಅಧ್ಯಕ್ಷ ಬಾಹುಬಲಿ ಪ್ರಸಾದ್ ಪ್ರಸ್ತಾವಿಕ ಸ್ವಾಗತ ಮಾಡಿದರು. ಕಾರ್ಯದರ್ಶಿ ರಮೇಶ್ ಚಂದ್ರ ವರದಿ ಮಂಡಿಸಿದರು. ಖಜಾಂಚಿ ಪ್ರದೀಪ್ ರೈ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಕರುಣಾಕರ ಶೆಟ್ಟಿ ವಂದಿಸಿದರು.

