ಕ್ರೀಡೆಗಳು ಆರೋಗ್ಯಕರ ಸ್ಪರ್ಧೆಯ ಜೊತೆಗೆ ಶಿಸ್ತನ್ನು ಕಲಿಸಿ ಸೌಹಾರ್ದತೆಯನ್ನು ಬೆಳೆಸಲು ಸಹಕಾರಿಯಾಗಿದೆ: ಸಂತೋಷ್ ಕುಮಾರ್
ಕಲ್ಲಡ್ಕ:ಯಾವುದೇ ಕ್ರೀಡೆಯಲ್ಲಿ ಶಿಸ್ತು ಮುಖ್ಯವಾಗಿದ್ದು,ಕ್ರೀಡೆಗಳು ಕೇವಲ ಆಟವಲ್ಲ ,ಇದು ಒಗ್ಗಟ್ಟಿನಿಂದ ಆಡುವ ಒಂದು ಆರೋಗ್ಯಕರ ಸ್ಪರ್ಧೆಯಾಗಿದೆ. ಈ ಸ್ಪರ್ಧೆಗಳು ಕ್ರೀಡಾ ಮನೋಭಾವನೆಯನ್ನು ಬೆಳೆಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸೌಹಾರ್ದತೆಯನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಹೇಳಿದರು.
ಅವರು ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಂಭೂರು ಇವುಗಳ ಆಶ್ರಯದಲ್ಲಿ ಶಂಭೂರು ಶಾಲೆಯಲ್ಲಿ ಜರಗಿದ ಕಲ್ಲಡ್ಕ ವಲಯ ಮಟ್ಟದ ಪ್ರಾಥಮಿಕ ವಿಭಾಗದ ಬಾಲಕರ ಹಾಗೂ ಬಾಲಕಿಯರ ವಾಲಿ ಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಶಾಲೆಯಲ್ಲಿ ಮಕ್ಕಳಿಗೆ ಪಾಠಗಳನ್ನು ಜೊತೆ ಕ್ರೀಡೆ ಮುಖ್ಯ, ಸಕರಾತ್ಮಕ ಭಾವನೆಗಳನ್ನು ಬೆಳೆಸಲು ಮನಸ್ಸನ್ನು ಸದೃಢವಾಗಿಸಲು ಕ್ರೀಡೆಯು ಸಹಕಾರಿಯಾಗಿದೆ,ಕ್ರೀಡೆಯಿಂದ ಬದುಕು ಕಟ್ಟಿಕೊಳ್ಳಬಹುದು ಎಂದು ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷೆ ವಿಮಲ,ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಶಾಂತಿಲ,ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಇಂದು ಶೇಖರ,ಕ್ರೀಡಾ ಕೂಟದ ನೋಡಲ್ ದೈಹಿಕ ಶಿಕ್ಷಕ ಜಗದೀಶ್ ಬಾಳ್ತಿಲ, ಗೋಳ್ತಮಜಲು ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್,ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಂಕರ್ ಕಲ್ಲಡ್ಕ, ಹಳ್ಳಿಮನೆ ಫುಡ್ ಪ್ರೋಡಕ್ಟನ ಮಾಲಕರಾದ ಯೋಗಿತಾ ಹೇಮಚಂದ್ರ, ಬೊಂಡಾಲ ಜಗನ್ನಾಥ ಸ್ಮಾರಕ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕಮಲಾಕ್ಷ, ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮಕ್ಕಳು ನಾಡಗೀತೆಯ ಮೂಲಕ ಪ್ರಾರ್ಥಿಸಿದರು,ಮುಖ್ಯ ಶಿಕ್ಷಕ ಜಯರಾಮ ಪಡ್ರೆ ಸ್ವಾಗತಿಸಿದರು.ಶಿಕ್ಷಕಿ ಚಿತ್ರಾ ವಂದಿಸಿದರು. ಶಿಕ್ಷಕಿ ಜಯಂತಿ ನಿರೂಪಿಸಿದರು.ದೈಹಿಕ ಶಿಕ್ಷಣ ಶಿಕ್ಷಕಿ ಇಂದಿರಾ ಕೆ ನಿರ್ವಹಿಸಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣ ಅಧಿಕಾರಿ ಆಶಾ ನಾಯಕ್,ಸಿ.ಆರ್.ಪಿ.ಗಳಾದ ಪ್ರೇಮಲತಾ ಹಾಗೂ ಸುಧಾಕರ ಭಟ್ ಭೇಟಿ ನೀಡಿ ಮಾರ್ಗದರ್ಶನ ಮಾಡಿದರು.
ನಂತರ ನಡೆದ ಪಂದ್ಯಾಟದಲ್ಲಿ
ಬಾಲಕಿಯರ ವಿಭಾಗದಲ್ಲಿ
ಪ್ರಥಮ ಸ್ಥಾನವನ್ನು..ಸ.ಉ.ಹಿ.ಪ್ರಾ ಶಾಲೆ ಮಾಣಿ,
ದ್ವಿತೀಯ ಸ್ಥಾನವನ್ನು ಸ.ಹಿ.ಪ್ರಾ.ಶಾಲೆ ಶಂಭೂರು
ಬಾಲಕರ ವಿಭಾಗದಲ್ಲಿ
ಪ್ರಥಮ ಸ್ಥಾನವನ್ನು ಸ.ಹಿ.ಪ್ರಾ.ಶಾಲೆ ಅನಂತಾಡಿ
ದ್ವಿತೀಯ ಸ್ಥಾನವನ್ನು ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆ ಪೆರಾಜೆ ಮಾಣಿ ಪಡೆದು ಕೊಂಡು ಮುಂದಿನ ತಾಲೂಕು ಹಂತದ ಪಂದ್ಯಕ್ಕೆ ಆಯ್ಕೆ ಆಯಿತು.