ದಿನಾಂಕ 14.08.2025 ರಂದು ವಿಧಾನ ಪರಿಷತ್ತಿನ ಕಲಾಪದಲ್ಲಿ ವಿಧಾನ ಪರಿಷತ್ತಿನ ಶಾಸಕ ಐವನ್ ಡಿ ಸೋಜಾ ರವರು ಕರ್ನಾಟಕ ಕರಾವಳಿವಲ್ಲಿ ಜರಗುವ ಜನಪ್ರಿಯ ಕಂಬಳ ಕ್ರೀಡಾಕೂಟಕ್ಕೆ ಸರ್ಕಾರದಿಂದ ಪ್ರತಿ ಕಂಬಳಕ್ಕೆ ರೂ.5 ಲಕ್ಷ ಅನುದಾನ ಬದಲು ರೂ.2 ಲಕ್ಷ ಅನುದಾನ ನೀಡಿ ಉಳಿದ ಹಣಕ್ಕೆ ಕತ್ತರಿ ಮಾಡಿರುವ ಬಗ್ಗೆ ಸದನದ ಶೂನ್ಯ ವೇಳೆಯಲ್ಲಿ ಮಾನ್ಯ ಸಭಾಪತಿಯವರ ಮೂಲಕ ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವರ ಗಮನ ಸೆಳೆದರು.