ಐಕಳ ಬಾವದಲ್ಲಿ ಕಂಬಳ ಸದಸ್ಯರ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

0
54

ಮುಲ್ಕಿ:ಸುವರ್ಣ ಸಂಭ್ರಮದ ಐಕಳ ಬಾವ ಕಾಂತಾಬಾರೆ – ಬೂದಾಬಾರೆ ಜೋಡುಕರೆ ಕಂಬಳ ಸದಸ್ಯರ ಸಭೆ ಹಾಗೂ ಐಕಳ ಕಂಬಳೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಡಿ.31 ನೇ ಬುಧವಾರ ಐಕಳ ಬಾವ ಧರ್ಮಚಾವಡಿ ಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಕಳ ಬಾವ ಕಾಂತಾಬಾರೆ – ಬೂದಾಬಾರೆ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಐಕಳಭಾವ ಡಾ. ದೇವಿಪ್ರಸಾದ್ ಶೆಟ್ಟಿ ವಹಿಸಿ ಮಾತನಾಡಿ ಈ ಬಾರಿ ಐಕಳ ಕಾಂತಾಬಾರೆ – ಬೂದಾಬಾರೆ ಜೋಡುಕರೆ ಕಂಬಳ 50ನೇ ವರ್ಷ ಆಚರಿಸುತ್ತಿದ್ದು ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ. ಕಂಬಳ ಯಶಸ್ವಿಗೆ ದಾನಿಗಳ ಹಾಗೂ ಗ್ರಾಮಸ್ಥರ ಸಹಕಾರ ಬೇಕು ಎಂದರು.

ಇದೇ ಸಂದರ್ಭದಲ್ಲಿ ಐಕಳೋತ್ಸವ 2026 ಸುವರ್ಣ ಸಂಭ್ರಮ ಐಕಳ ಬಾವ ಕಂಬಳ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಕಂಬಳ ಸಮಿತಿಯ ಸದಸ್ಯರಾದ ಪ್ರಕಾಶ್ ಶೆಟ್ಟಿ, ಪಡುಹಿತ್ಲು,,ಲೋಕೇಶ್ ಶೆಟ್ಟಿ ಮುಚ್ಚೂರು, ಸುಕುಮಾರ್ ಭಂಡಾರಿ ಐಕಳ ಬಾವ, ಸ್ವರಾಜ್ ಶೆಟ್ಟಿ ಮುಂಡ್ಕೂರು ದೊಡ್ಡಮನೆ,ಸಾಯಿನಾಥ್ ಶೆಟ್ಟಿ ಪ್ರದೀಪ್ ರೈ, ಲೀಲಾದರ್ ಶೆಟ್ಟಿ ,ಮುಂಡ್ಕೂರು ಶರತ್ ಶೆಟ್ಟಿ ಸಂಕಲಕರಿಯ, ಶ್ರೀಶ ಸರಾಫ್ ಐಕಳ,ರಾಮಚಂದ್ರ ಶೆಟ್ಟಿ ,ಐಕಳ ಗ್ರಾ ಪಂ ಸದಸ್ಯ ದಯೇಶ್ ಕೊಟ್ಯಾನ್ ಕೋಟ್ಯಾನ್ ,ಮಾಜೀ ಸದಸ್ಯ ಸುಧಾಕರ್ ಸಾಲ್ಯಾನ್ ಏಳಿಂಜೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here