ಕಾಣಿಯೂರು: ಹಿರಿಯ ವಿದ್ಯಾರ್ಥಿ ಸಂಘ ಮತ್ತು ಎಸ್.ಡಿ.ಎಂ.ಸಿ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾಣಿಯೂರು’ ಹಾಗೂ ಒಡಿಯೂರು ಗ್ರಾಮ ವಿಕಾಸ ಯೋಜನೆ ಕಾಣಿಯೂರು ಘಟಸಮಿತಿ ಸಂಯುಕ್ತ ಆಶ್ರಯದಲ್ಲಿ ದಿನಾಂಕ 03.08.2025 ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 9.00ಕ್ಕೆ ದ.ಕ.ಜಿ.ಪ.ಹಿ.ಪ್ರಾಶಾಲೆ ಕಾಣಿಯೂರು ಶಾಲಾ ವಠಾರದಲ್ಲಿ ಆಟಿದ ಕೂಟವು ಜರಗಲಿರುವುದು.
ಶ್ರೀನಿಧಿ ಆಚಾರ್ ವ್ಯವಸ್ಥಾಪಕರು, ಕಾಣಿಯೂರು ಮಠ ಉದ್ಘಾಟಿಸಲಿರುವರು. ರೋಹಿತ್ ಗೌಡ ಅನಿಲ ಮೊಕ್ತೇಸರರು, ಶಿರಾಡಿ ರಾಜನ್ ದೈವಸ್ಥಾನ ವಿಲಡ್ಕ ಕಾಣಿಯೂರು, ಶ್ರೀ ವಸಂತ ಗೌಡ ಕಂಪ ಮೊಕ್ತೇಸರರು, ಶಿರಾಡಿ ರಾಜನ್ ದೈವಸ್ಥಾನ ವಿಲಡ್ಕ ಕಾಣಿಯೂರು, ಪುಟ್ಟಣ್ಣ ಗೌಡ ಮುಗರಂಜ ಅಧ್ಯಕ್ಷರು, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಕಾಣಿಯೂರು ಗೌರವ ಉಪಸ್ಥಿತಿಯಲಿರಲಿರುವರು. 12-00 ಗಂಟೆಗೆ ನೂತನ ಧ್ವಜಸ್ತಂಭದ ಉದ್ಘಾಟನೆ ಗೊಂಡು ಸಮಾರೋಪ ಸಮಾರಂಭ ನಡೆಯಲಿದೆ.