ಕಣಿಯೂರು ಚಾಮುಂಡೇಶ್ವರಿ ಕ್ಷೇತ್ರ; ಸೆ. 22ರಿಂದ 30ರವರೆಗೆ ನವರಾತ್ರಿ ಸಂಭ್ರಮ

0
165

ಕಣಿಯೂರು: ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದಲ್ಲಿ ಸೆ. 22ರಿಂದ ಸೆ. 30ರವರೆಗೆ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನವರಾತ್ರಿ ಮಹೋತ್ಸವವು ವೇ.ಮೂ. ನಡಿಬೈಲು ಶಂಕರನಾರಾಯಣ ಭಟ್‌ ಅವರ ನೇತೃತ್ವದಲ್ಲಿ ಜರಗಲಿದೆ.

ಪ್ರತಿದಿನ ಬೆಳಿಗ್ಗೆ 7-30 ರಿಂದ ಶ್ರೀ ದೇವಿಗೆ ಅಭಿಷೇಕ ಮತ್ತು ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸೆ. 24ರಂದು ಸತ್ಯನಾರಾಯಣ ಪೂಜೆ, ಸಂಜೆ 5-30 ರಿಂದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ಸೆ. 25ರಂದು ಭಜನ ಸಂಕೀರ್ತಣೆ ನಡೆಯಲಿದೆ. ಸೆ. 26ರಂದು ದುರ್ಗಾಪೂಜೆ, ಸಪ್ತಶತೀ ಪಾರಾಯಣ, ಸೆ. 27ರಂದು ನಾಗತಂಬಿಲ ನಡೆಯಲಿದೆ.

ಸೆ. 28ರಂದು ಬೆಳಿಗ್ಗೆಯಿಂದ ಚಂಡಿಕಾಹೋಮ, ಬಳಿಕ 10-45ರಿಂದ ಧಾರ್ಮಿಕ ಸಭೆ ನಡೆಯಲಿದೆ. ಕಣಿಯೂರು ಕ್ಷೇತ್ರದ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು, ಮಂಗಳೂರು ಕ್ಯಾಂಪ್ಕೊ ಲಿ.ನ ನಿರ್ದೇಶಕ ಡಾ. ಜಯಪ್ರಕಾಶ್‌ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಲಿರುವರು. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಸೇರಿದಂತೆ ಹಲವು ಅತಿಥಿ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here