ದಿನಾಂಕ 10.02.2026 ರಂದು ಮಂಗಳವಾರ ಮಧ್ಯಾಹ್ನ 2.00 ರಿಂದ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಪಳ್ನೀರು ಮಂಗಳೂರು ಇಲ್ಲಿನ ಸಭಾಂಗಣದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಮುಖೇನ ಕಾರ್ಯಕ್ರಮ ಆರಂಭವಾಯಿತು.
ಶಿಕ್ಷಕರು, ದಕ್ಷಿಣಕನ್ನಡ ಜಿಲ್ಲಾಧ್ಯಕ್ಷರಾದ ರೇಖಾ ಸುದೇಶ್ ರಾವ್ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಂತಿಯ ಡಿಸೋಜಾ ದೀಪ ಬೆಳಗಿಸಿ ಉದ್ಘಾಟನೆಗೈದರು. ಉಮೇಶ್ ರಾವ್ ಕುಂಬಳೆ ಕಾರ್ಯಾಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಘಟಕ ಪ್ರಸ್ತಾವನೆ ನುಡಿಗಳನ್ನಾಡಿದರು. ಕನ್ನಡ ಭವನ ಮತ್ತು ಗ್ರಂಥಾಲಯ ಕಾಸರಗೋಡು, ಇದರ ಸ್ಥಾಪಕ ಅಧ್ಯಕ್ಷರು ಡಾ. ವಾಮನ್ ರಾವ್ ಬೇಕಲ್ ಕನ್ನಡ ಸಾಹಿತ್ಯದ ಬಗ್ಗೆ ಒಲವು ಆಸಕ್ತಿ ಮೂಡಲು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಹಿತನುಡಿಗಳನಾಡಿದರು.

ಸಂಧ್ಯಾ ರಾಣಿ ಟೀಚರ್ ಕನ್ನಡ ಭವನ ಕಾಸರಗೋಡು ಸಂಚಾಲಕರು , ಸ್ಥಾಪಕರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕರು ಲವೀನ ಅನಿಟ ಡಿಸೋಜಾ ನಿರೂಪಣೆಗೈದರು. ಸುಮಾರು 35 ರಷ್ಟು ವಿದ್ಯಾರ್ಥಿಗಳು ಕವನವಾಚನ , ರಸಪ್ರಶ್ನೆಯಲ್ಲಿ ಭಾಗವಹಿಸಿದ್ದರು. ಶಿಕ್ಷಕಿ ಶ್ರೀಲಕ್ಷ್ಮಿ ಕೀಕಾನ ವಂದಿಸಿದರು. ಕವನ ವಾಚನಗೈದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಂತಿಯ ಡಿಸೋಜಾ ಹಾಗೂ ಶಿಕ್ಷಕಿ ಲವೀನ ಅನಿಟ ಡಿಸೋಜಾ ಇವರನ್ನೂ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದವತಿಯಿಂದ ಗೌರವಿಸಲಾಯಿತು. ರೇಖಾ ಸುದೇಶ್ ರಾವ್ ಧನ್ಯವಾದಗೈದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.


