ಕಚ್ಚೂರು ಶ್ರೀ ಮಾಲ್ದಿ ದೇವಿ ಅಮ್ಮನವರ ಕನ್ನಡ ಭಕ್ತಿಗೀತೆ : “ಕಾರಣಿಕದ ಕಚ್ಚೂರ ಮಾಲ್ದಿ ದೇವಿ” ಕನ್ನಡ ಭಕ್ತಿಗೀತೆ ಬಿಡುಗಡೆ

0
18

ಶ್ರೀ ಬ್ರಾಮರಿ ಕ್ರಿಯೇಷನ್ಸ್ ಬೈಲುಬೀಡು ಬಜಪೆ ಇವರು ಅರ್ಪಿಸುವ” ಶುಭ ಮತ್ತು ದಿನೇಶ್ ನಿರ್ಮಾಣದ, ಬರವುದ ತುಡರ್”ನವೀನ್ ಸುವರ್ಣ ಪಡ್ರೆ ಇವರ ಸಾಹಿತ್ಯದ. ಬಾಲ ಕಲಾವಿದ ಅಕ್ಷರ್ ಕುಮಾರ್ ಕಾರ್ಕಳ ಇವರು ಹಾಡಿರುವ ಕಚ್ಚೂರು ಶ್ರೀ ಮಾಲ್ದಿ ದೇವಿ ಅಮ್ಮನವರ ಕನ್ನಡ ಭಕ್ತಿಗೀತೆ “ಕಾರಣಿಕದ ಕಚ್ಚೂರ ಮಾಲ್ದಿ ದೇವಿ” ಇದರ ಬಿಡುಗಡೆಯು ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೈವಸ್ಥಾನದಲ್ಲಿ ನೆರವೇರಿತು.

ದೇವಳದ ಪ್ರಧಾನ ಅರ್ಚಕರಾದ ಕೃಷ್ಣ ಅಡಿಗರವರು ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೂ ಬಬ್ಬು ಸ್ವಾಮಿಗೂ ಅವಿನಾಭಾವದ ಸಂಬಂಧ ಇದೆ, ಶ್ರೀ ಬ್ರಾಮರಿ ಕ್ರಿಯೇಷನ್ ನ ದಿನೇಶ್ ರವರು ಕಲಾ ಸೇವೆಯ ಜೊತೆಗೆ ಕಲೆ ಹಾಗೂ ಕಲಾವಿದರನ್ನು ಬೆಳೆಸುವ ಸತ್ಕಾರ್ಯವನ್ನು ಮಾಡುತ್ತಿದ್ದಾರೆ, ಎನ್ನುತ್ತಾ ಶ್ಲಾಘನೆ ವ್ಯಕ್ತಪಡಿಸಿದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರಾಜೇಂದ್ರ ಚಿಲಿಂಬಿ ಇವರು ಶುಭ ಹಾರೈಸಿದರು.ನಿರ್ಮಾಪಕರಾದ ಶುಭ ಮತ್ತು ದಿನೇಶ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ನವೀನ್ ಸುವರ್ಣ ಪಡ್ರೆ,ಗಾಯಕ ಮಾ/ಅಕ್ಷರ್ ಕುಮಾರ್ ಕಾರ್ಕಳ, ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸ್ಕೇಟಿಂಗ್ ಭರತ ನಾಟ್ಯ ಕಲಾವಿದೆ ಸುಶ್ರಾವ್ಯ ಯು,ಅಶೋಕ್ ಭಂಡಾರಿ ಕಾರ್ಕಳ,ಅನಿತಾ ಕಾರ್ಕಳ, ಗೀತಾ ನವೀನ್, ಉದಯ ಕುಮಾರ್ ಯು. ಚಿಲಿಂಬಿ , ಶಶಿರೇಖಾ ಎಸ್ ಮತ್ತಿತರರು ಉಪಸ್ಥಿತರಿದ್ದರು.

Sri brahamari creation ಯೂಟ್ಯೂಬ್ ಚಾನೆಲ್ ನಲ್ಲಿ ಈ ಭಕ್ತಿಗೀತೆಯನ್ನು ವೀಕ್ಷಿಸಬಹುದು.

LEAVE A REPLY

Please enter your comment!
Please enter your name here