ಅಮೃತ ಭಾರತಿ ವಿದ್ಯಾ ಕೇಂದ್ರದಲ್ಲಿ ದಿನಾಂಕ 01-11-2025 ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ “ಕನ್ನಡ ಡಿಂಡಿಮ ” ಕಾರ್ಯಕ್ರಮ ನಡೆಯಿತು .ಪ್ರಾಂಶುಪಾಲರಾದ ಶ್ರೀಯುತ ಅರುಣ್, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅನಿತಾ ಹಾಗೂ ಶಿಕ್ಷಕ ವೃಂದದವರು ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .
ಪ್ರಾಂಶುಪಾಲರಾದ ಶ್ರೀಯುತ ಅರುಣ್ ರವರು ಮಾತನಾಡಿ “ಕನ್ನಡ ನಮ್ಮ ಹೃದಯದ ಭಾಷೆ, ಕನ್ನಡವನ್ನು ಉತ್ತೇಜಿಸುವ” ಎಂದು ತಮ್ಮ ಕನ್ನಡ ಅಭಿಮಾನವನ್ನು ವ್ಯಕ್ತಪಡಿಸಿದರು. ಕುಮಾರಿ ಅದಿತಿ ಕನ್ನಡದ ಹಿರಿತನದ ಪರಂಪರೆಯ ಬಗ್ಗೆ ಮಾತನಾಡಿದಳು. ಶಾಲಾ ನಾಯಕ ಸೃಜನ್ ಅರುಣ್ ವಿದ್ಯಾರ್ಥಿಗಳಿಗೆ ಭಾರತೀಯ ಪರಂಪರೆಯನ್ನು ಉಳಿಸಿ ಬೆಳೆಸುವ ಬಗ್ಗೆ ಪ್ರತಿಜ್ಞೆ ಮಾಡಿಸಿದರು. ಕನ್ನಡ ಶಿಕ್ಷಕಿ ಶ್ರೀಮತಿ ಪ್ರಮೋದ ಮಾತಾಜಿಯವರು ನಿರೂಪಿಸಿದರು. ಸಾಂಸ್ಕೃತಿಕ ನೃತ್ಯದೊಂದಿಗೆ ಸರ್ವರೂ ನಾಡಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮ ಸಂಪನ್ನವಾಯಿತು.

