ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆ ಕಡ್ಡಾಯವಾಗಬೇಕು ; ರೂಪೇಶ್ ರಾಜಣ್ಣ

0
24

ರಿಪ್ಪನ್‌ಪೇಟೆ :  ಕನ್ನಡ ಕೇವಲ ಮಾತೃಭಾಷೆಯಲ್ಲ. ಭಾವನೆಗಳ ಅಭಿವ್ಯಕ್ತಗೊಳಿಸುವ ತಾಯ್ನುಡಿ. ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆ ಅತ್ಯಂತ ಪುರಾತನ ಭಾಷೆಯಾಗಿದೆ ಎಂದು ರಾಜ್ಯ ಯುವ ಕರ್ನಾಟಕ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿಗ್‌ಬಾಸ್ 9ರ ಸ್ಪರ್ಧಿ ರೂಪೇಶ್ ರಾಜಣ್ಣ ಹೇಳಿದರು.

ರಿಪ್ಪನ್‌ಪೇಟೆಯ ಕಲಾಕೌಸ್ತುಭ ಕನ್ನಡ ಸಂಘದ 32ನೇ ವಾರ್ಷಿಕೋತ್ಸವ ಮತ್ತು 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿ, ವಿಭಿನ್ನತೆಯಲ್ಲಿ ಏಕತೆಯನ್ನು ಕಂಡ ಕರ್ನಾಟಕ ಯಾವುದೇ ಅನ್ಯ ಭಾಷಿಕರು ಬಂದು ಇಲ್ಲಿ ವಾಸ ಮಾಡುವುದರೊಂದಿಗೆ ತಮ್ಮ ಮಾತೃಭಾಷೆಯಲ್ಲಿಯೇ ವ್ಯವಹರಿಸುತ್ತಾರೆ. ನಮ್ಮ ಕನ್ನಡಿಗರು ಬೇರೆ ಕಡೆ ಹೋದರೆ ಕನ್ನಡ ಮಾತನಾಡಿದರೆ ಸಂಕಷ್ಟವನ್ನು ಎದುರಿಸುವಂತಾಗಿದೆ. ಹೀಗೆ 1956 ರಲ್ಲಿ ಕನ್ನಡ ಏಕೀಕರಣ ನಂತರ 1974 ರಲ್ಲಿ ಸಂಪೂರ್ಣ ಕರ್ನಾಟಕ ಭಾಷಾ ಸ್ವಾತಂತ್ರ್ಯವನ್ನು ಪಡೆಯುವಂತಾಯಿತು ಎಂದು ಹೇಳಿ, ಕರ್ನಾಟಕದಲ್ಲಿನ ಬ್ಯಾಂಕ್ ಮತ್ತು ರೈಲ್ವೆ, ಅಂಚೆ ಇಲಾಖೆಯಲ್ಲಿ ಉದ್ಯೋಗಿಗಳು ಬೇರೆ ಭಾಷೆಯಲ್ಲಿ ವ್ಯವಹರಿಸುತ್ತಿದ್ದು ಅವರು ನಮ್ಮ ನಾಡಿನ ಕನ್ನಡ ಭಾಷೆಯಲ್ಲಿಯೇ ವ್ಯವಹರಿಸುವಂತಾಗ ಬೇಕು ಎಂದು ಹೇಳಿ, ಅಂತಹವರ ವಿರುದ್ಧ ಧ್ವನಿ ಎತ್ತಿ ಹೋರಾಟ ನಡೆಸುವುದು ಅನಿರ್ವಾಯವಾಗಿದೆ ಎಂದ ಅವರು, ಬೆಳಗಾವಿಯಲ್ಲಿ ಸಹ ಮರಾಠಿ ಭಾಷಿಗರು ಕನ್ನಡಿಗರ ವಿರುದ್ಧ ದೌರ್ಜನ್ಯ ಎಸಗುತ್ತಿದ್ದು ಅದನ್ನು ತಡೆಯುವಲ್ಲಿ ನಮ್ಮ ಸಂಘಟನೆ ಯಾವುದೇ ಹೋರಾಟಕ್ಕೂ ಸಿದ್ದವಾಗಿಯೆ ಇರುತ್ತದೆಂದು ಎಚ್ಚರಿಕೆ ನೀಡಿದರು.

ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ಮುರುಳಿಧರ ಕೆರೆಹಳ್ಳಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ತು ರಾಜ್ಯಾಧ್ಯಕ್ಷ ಡಾ.ರವಿಶೆಟ್ಟಿ ಬೈಂದೂರು ವಿತರಿಸಿ ಮಾತನಾಡಿ, ಕನ್ನಡ ಭಾಷೆಯ ಉಳಿವಿಕೆಗೆ ನಾವುಗಳು ಕಟ್ಟಿಬದ್ದರಾಗಬೇಕು. ಕನ್ನಡ ಗ್ರಾಮೀಣ ಪ್ರದೇಶದಲ್ಲಿ ಉಳಿದಿದೆ ಆದರೆ ಪಟ್ಟಣ ನಗರ ಪ್ರದೇಶದಲ್ಲಿ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಕ್ಷೀಣಿಸುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿ, ಕನ್ನಡ ಭಾಷೆಯ ಉಳಿವಿಕೆಗೆ ಯಾವುದೇ ಹೋರಾಟಕ್ಕೂ ಸಿದ್ದವಿರುವುದಾಗಿ ಎಚ್ಚರಿಕೆ ನೀಡಿ, ಕನ್ನಡಿಗ ಸತ್ತಿರಬಹುದು ಆದರೆ ಕನ್ನಡ ಭಾಷೆಯಾವಾಗಲು ಸಾಯುವುದಿಲ್ಲ ಎಂದರು.

ಬಿಜೆಪಿ ಯುವಮುಖಂಡ ಕೆ.ಎಸ್.ಪ್ರಶಾಂತ್, ದುಬೈ ಒಕ್ಕಲಿಗರ ಸಂಘದ ಅಧ್ಯಕ್ಷ ಆರ್.ವಿ.ಗ್ರೂಪ್ ಯತೀಶ್ ಬಿ.ಎನ್.ಗೌಡ, ಉದ್ಯಮಿ ನಿತಿನ್ ನಾರಾಯಣಗೌಡ, ಕೊಡುಗೈದಾನಿ ಉದ್ಯಮಿ ಮಹೇಂದ್ರ ಎಂ, ಕಲಾಕೌಸ್ತುಭ ಕನ್ನಡ ಸಂಘದ ಸಂಸ್ಥಾಪಕ ಅಧ್ಯಕ್ಷ ಸಿ.ಚಂದ್ರಬಾಬು, ಕರ್ನಾಟಕ ಪ್ರಾಂತೀಯ ಹಿಂದು ರಾಷ್ಟ್ರ ಸೇನಾ ಸಮಿತಿಯ ಕಟ್ಟಡ ಸಮಿತಿಯ ಅಧ್ಯಕ್ಷ ಎಂ.ಬಿ.ಮಂಜುನಾಥ, ಹುಂಚ ಗ್ರಾಮ ಪಂಚಾಯಿತ್ ಸದಸ್ಯೆ ಯಶಸ್ವತಿ ವೃಷಭರಾಜ್ ಜೈನ್, ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತ್ ಸದಸ್ಯರಾದ ಸುಂದರೇಶ್, ಜಿ.ಡಿ.ಮಲ್ಲಿಕಾರ್ಜುನ, ದೀಪಾ ಸುದೀರ್, ಅಶ್ವಿನಿ ರವಿಶಂಕರ್, ವನಮಾಲ, ಬಿ.ರಾಮಚಂದ್ರ ಬಳೆಗಾರ್, ಎಂ.ಸುರೇಶ್‌ಸಿಂಗ್, ಪದ್ಮ ಸುರೇಶ್, ಉಮಾ ಸುರೇಶ್, ಸೀತಾ, ಗೀತಾ ಕರಿಬಸಪ್ಪ, ಲೀಲಾ ಉಮಾಶಂಕರ್, ರವೀಂದ್ರ ಕೆರೆಹಳ್ಳಿ, ನಾಗರತ್ನ ದೇವರಾಜ್, ಶೈಲಾ ಆರ್.ಪ್ರಭು, ಲಕ್ಷ್ಮಿ ಶ್ರೀನಿವಾಸ್ ಆಚಾರ್, ಪದ್ಮಾ ಕುಮಾರ್, ರೇಖಾ ರವಿ, ಗೀತಾ ಅಣ್ಣಪ್ಪ, ವೇದಾವತಿ, ನಾಗರಾಜ ಕೆದಲುಗುಡ್ಡೆ, ಗನ್ನಿಸಾಬ್‌ ಕೆಂಚನಾಲ, ಸತೀಶ್ ಹುಳಿಗದ್ದೆ, ಯೋಗೇಂದ್ರಪ್ಪಗೌಡ, ಆಶಾ ಬಸವರಾಜ, ರಾಘು ಆರ್ಟ್ಸ್, ವರ್ಗೀಶ್ ಪಿ.ಜೆ, ದಿವಾಕರ್, ಚಂದ್ರ ಸಿದ್ದಪ್ಪನಗುಡಿ, ಸಂದೀಪ್‌ಶೆಟ್ಟಿ, ಭೀಮರಾಜ್, ಸೀನಾ, ಮಂಜು, ನವೀನ್, ನಿತೀನ್ ಎಂ.ಗೌಡ, ಸನೂಫ್‌ಸಿಂಗ್, ಮಹೇಶ್ ಏಜೆಂಟ್, ಆದರ್ಶ ಕೆ.ಇನ್ನಿತರರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಸನ್ಮಾನಿತರಾರ ಭದ್ರಣ್ಣ ದೊಡ್ಡಿನಕೊಪ್ಪ, ದ್ಯಾವಪ್ಪಗೌಡ, ಜೆನೋಮ್ ಸೇವಿಯರ್ ಕೃಷಿ ತಜ್ಞರು ಪ್ರಶಸ್ತಿ ಪುರಸ್ಕೃತ ಆನಂತಮೂರ್ತಿ ಜವಳಿ, ನಿವೃತ್ತ ಉಪನ್ಯಾಸಕಿ ಜಿ.ಎಸ್.ಸರೋಜಮ್ಮ, ನಿವೃತ್ತ ಯೋಧ ಗಿರೀಶ್, ಗಿನ್ನಸ್ ವರ್ಲ್ಡ್ ರೆಕಾರ್ಡ್ ಪುರಸ್ಕೃತ ಕು.ಕವನ, ಪ್ರಗತಿಪರ ರೈತ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಕಮಲಮ್ಮ ಕೋಂ ಟೀಕಪ್ಪ ಕಾರಗೋಡು, ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತ ಮಾಣಿಕೆರೆ ಪ್ರಕಾಶಗೌಡ, ಅಂಧರ ಕ್ರಿಕೆಟ್ ವಿಶ್ವಕಪ್ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಕಾವ್ಯ ವೆಂಕಟೇಶ್ ಆಚಾರ್, ಡಾ. ಆರ್.ಗಣೇಶ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕು.ಕುಮುದಾ ಪ್ರಾರ್ಥಿಸಿದರು. ಉಮಾ ಸುರೇಶ್ ಸ್ವಾಗತಿಸಿದರು‌. ಶಿಕ್ಷಕಿ ಅಂಬಿಕಾ ಚಂದ್ರಶೇಖರ್ ನಿರೂಪಿಸಿದರು, ಎಂ.ಸುರೇಶ್‌ಸಿಂಗ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರತ್ನ ದೇವರಾಜ್ ವಂದಿಸಿದರು. ನಂತರ ಮಂಗಳೂರಿನ ಕುಳಾಯಿ ಕಲಾಕುಂಭ ಕಲಾವಿದರಿಂದ ಪರಮಾತ್ಮ ಪಂಜುರ್ಲಿ ಪೌರಾಣಿಕ ಕನ್ನಡ ನಾಟಕ ಪ್ರದರ್ಶನ ಜರುಗಿತು.

LEAVE A REPLY

Please enter your comment!
Please enter your name here