ಉಡುಪಿ ಸೈಲಸ್ ಪದವಿ ಪೂರ್ವ ಕಾಲೇಜಿನಲ್ಲಿ  ಕನ್ನಡ ರಾಜ್ಯೋತ್ಸವವವು ನ.1 ರಂದು ನಡೆಯಿತು . ಕನ್ನಡ ಭಾಷೆ ತಾಯಿ ಸಮಾನ, ಕನ್ನಡ ನುಡಿಯನ್ನು ಗೌರವಿಸಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ ಎಂದು ಉಪನ್ಯಾಸಕಿ ಶಾಲಿನಿ ಹೇಳಿದರು.
ಅವರು ನಿಟ್ಟೂರಿನ ಸೈಲಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಪ್ರಿನ್ಸಿಪಾಲ್ ಡಾ ಜಾರ್ಜ್ ಅಧ್ಯಕ್ಷತೆ ವಹಿಸಿ ,ಕನ್ನಡ ನಾಡಿನ ನೆಲ ಜಲ ಭಾಷೆಯ ಬಗ್ಗೆ ಶ್ರೇಷ್ಠ ಭಾವನೆಯನ್ನು ಬೆಳೆಸಿಕೊಳ್ಳಬೇಕು ಕನ್ನಡ ಕೇವಲ ಭಾಷೆಯಾಗಿರದೆ, ಅದೊಂದು ಅದ್ಭುತ ಸಂಸ್ಕೃತಿ ಎಂದರು. ಬಳಿಕ ವಿದ್ಯಾರ್ಥಿಗಳಿಂದ ಕನ್ನಡ ನಾಡಿನ ಹಿರಿಮೆಗರಿಮೆಯನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಉಡುಪಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿ ವೈಷ್ಣವಿ ಯವರನ್ನು ಸನ್ಮಾನಿಸಲಾಯಿತು.ಗ್ರೀಷ್ಮ ಸಾನ್ವಿ , ಜಾಯ್ ಲಿನ್ ಪ್ರಾರ್ಥಿಸಿದರು.ನಂದಿತಾ ಕಾರ್ಯಕ್ರಮ ನಿರೂಪಿಸಿದರು. ಸಮೀಕ್ಷಾ ವಂದಿಸಿದರು.

