ಆರ್ ಪಿ ಕಲಾ ಸೇವಾ ಟ್ರಸ್ಟ್ ( ರಿ) ಇದರ ಸಂಚಾಲಕರು ಹಾಗೂ ಸಂಘಟಕರು, ಖ್ಯಾತ ಗಾಯಕರು , ಯುವ ಸಾಹಿತಿ , ಕವಿ,ಜಾನಪದ ನೃತ್ಯಗಾರರಾದ ಕಲಾ ರತ್ನ ರವಿ ಪಾಂಬಾರು ಅವರು ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮದೇ ಅದಾ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಾಗೂ ಸಾಧನೆ ಹಾದಿಯಲ್ಲಿ ಸಾಗುತ್ತಿರುವ ಪ್ರತಿಭೆ ಕಲೆ ಸಂಸ್ಕೃತಿಯನ್ನು ಗುರುತಿಸಿ ಕನ್ನಡ ಫಿಲಂ ಚೇ0ಬರ್ ( ರಿ) ಇದರ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ದಲ್ಲಿ ದಿನಾಂಕ 24 ಡಿಸೇಂಬರ್ ರಂದು ಕನ್ನಡ ರಾಜ್ಯೋತ್ಸವ 2025 ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು .
ಈ ಸಂದರ್ಭದಲ್ಲಿ ಕನ್ನಡ ಫಿಲಂ ಚೇ0ಬರ್ ಎಂ ಎಸ್ ರವೀಂದ್ರರವರು ಹಾಗೂ ಸಾಹಿತಿ ನಟ ಜ್ಯೋತಿಷಿ , ಚಲನಚಿತ್ರ ನಿರ್ದೇಶಕ ಭೀಮರಾವ್ ವಾಷ್ಟರ್, ಆರ್ ಪಿ ಕಲಾ ಸೇವಾ ಟ್ರಸ್ಟ್ ( ರಿ) ಅಧ್ಯಕ್ಷರಾದ ಶ್ರೀಧರ್ ಎಕ್ಕಡ್ಕ,ಮಾರಿಯಮ್ಮ , ಸೇವಾ ಸಮಿತಿ ಅಧ್ಯಕ್ಷರಾದ ವಿಠ್ಠಲ್ ನಾಯ್ಕ್ ಬಳ್ಳಿಕ್ಕನಾ ಚಲನಚಿತ್ರ ನಾಯಕ ನಟರು, ನಿರ್ದೇಶಕರು, ಸಾಮಾಜಿಕ ಗಣ್ಯರು ಧಾರ್ಮಿಕ ಕ್ಷೇತ್ರದ ಮುಖಂಡರು ಗಣ್ಯರು ಉಪಸ್ಥಿತರಿದ್ದರು .

