ಆಮಂತ್ರಣ ಪರಿವಾರದ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ಪರ್ಣಕುಟೀರ ಇದರ ಮಯೂರ ತಂಡದಿಂದ ನವೆಂಬರ್ 1 ರಂದು ವಿಭಿನ್ನ ಶೈಲಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ ಹಮ್ಮಿಕೊಳ್ಳಲಾಗಿದೆ.
ಸಂಭ್ರಮದ ಉದ್ಘಾಟನೆಯನ್ನು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ರಾಜ್ಯ ಪ್ರತಿನಿಧಿ ಆಶಾ ಅಡೂರು ನೆರವೇರಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಆಮಂತ್ರಣ ವೇದಿಕೆಯ ವಿಶ್ವನಾಥ ಕುಲಾಲ್ ಮಿತ್ತೂರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆಮಂತ್ರಣ ರಾಜ್ಯ ಪ್ರತಿನಿಧಿಗಳಾದ ಉಮಾ ಸುನಿಲ್ ಹಾಸನ, ಭಾರತಿ ಪರ್ಕಳ, ಬೆಳ್ತಂಗಡಿ ಆಮಂತ್ರಣ ವೇದಿಕೆಯ ಅಧ್ಯಕ್ಷೆ ವಿದ್ಯಾಶ್ರೀ ಅಡೂರು, ಅಮಿತಾ ಶಮಂತ್ ಚಿಕ್ಕಮಗಳೂರು ಭಾಗವಹಿಸುವರು.
ಕಾರ್ಯಕ್ರಮದಲ್ಲಿ ಕನ್ನಡದ ಅಂದ ನಮ್ಮಿಂದ ಹಾಡುಗಳನ್ನು ಸ್ಮಿತಾ ಅಶೋಕ್ ಪರ್ಕಳ , ಅನಿತಾ ಶೆಟ್ಟಿ ಮೂಡುಬಿದಿರೆ, ವಿಜಯಲಕ್ಷ್ಮಿ ನಾಯ್ಕ್ ಬಿಳಿಯೂರು, ಸಂಧ್ಯಾ ಭಟ್ ಅರಂತಾಡಿ ಹಾಡಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ಜರಗಲಿದೆ. ಕಾರ್ಯಕ್ರಮಕ್ಕೆ ಪುತ್ತೂರು ತಾಲೂಕು ಆಮಂತ್ರಣ ವೇದಿಕೆ ಅಧ್ಯಕ್ಷೆ ಆಶಾ ಮಯ್ಯ, ರೇವತಿ ಪದ್ಮರಾಜ್,ರೂಪಜೀವನ್ ಸುಳ್ಯ, ಶೈಲಜ ಹೆಗ್ಡೆ ಕಾರ್ಕಳ,
ಸುಮಂಗಲ ಕಿಣಿಬಮೂಡುಬಿದಿರೆ, ರೂಪೇಶ್ ವಿಟ್ಲ, ಅವಿನಾಶ್ ಸೆರೆಮನಿ, ನ್ಯಾನ್ಸಿ ನೆಲ್ಯಾಡಿ ಸಹಕರಿಸಲಿದ್ದಾರೆ ಎಂದು ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಅಳದಂಗಡಿ ತಿಳಿಸಿದ್ದಾರೆ.

