ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ನೇತೃತ್ವದಲ್ಲಿ ದ್ವಾರಕಾ ಪ್ರತಿಷ್ಠಾನ(ರಿ) ಪುತ್ತೂರು ಪ್ರಾಯೋಜಕತ್ವದಲ್ಲಿ ಸಾಹಿತ್ಯದ ಚಿತ್ತ ವಿದ್ಯಾರ್ಥಿಗಳತ್ತ ಘೋಷವಾಕ್ಯದೊಂದಿಗೆ ವಿದ್ಯಾರ್ಥಿಗಳಿಗಾಗಿ.. “ಕನ್ನಡ ರಾಜ್ಯೋತ್ಸವ ಅಂಚೆ ಕಾರ್ಡ್ ಕವನ ಸ್ಪರ್ಧೆ -೨0೨೫”
ನಿಯಮಾವಳಿ
- ಪುತ್ತೂರು ತಾಲೂಕಿನಲ್ಲಿ ವಾಸವಾಗಿರುವ ಅಥವಾ ಅಧ್ಯಯನ ಮಾಡುತ್ತಿರುವ ಪ್ರಾಥಮಿಕ -ಪ್ರೌಢ -ಪಿಯು ಹಾಗೂ ಕಾಲೇಜು- ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾತ್ರ
- ಕವನದ ವಿಷಯ ಕನ್ನಡ ನಾಡು -ನುಡಿ- ಸಂಸ್ಕೃತಿ – ನೆಲ ಜಲಕ್ಕೆ ಸಂಬಂಧಿತ ವಾಗಿರತಕ್ಕದ್ದು.
- ಕವನದ ಗರಿಷ್ಠ ಸಾಲುಗಳು 12 ಮಿತಿಯಲ್ಲಿ ಇರತಕ್ಕದ್ದು.
- ನಿಮ್ಮ ಹೆಸರು, ತರಗತಿ, ವಿಳಾಸ, ವಾಟ್ಸಪ್ ಸಂಖ್ಯೆ ಕಡ್ಡಾಯವಾಗಿ ನಮೂದಿಸಿ ಇರತಕ್ಕದ್ದು.
- ಆಯ್ಕೆಯಾದ ಕವನಗಳಿಗೆ ಪ್ರಥಮ -ದ್ವಿತೀಯ- ತೃತೀಯ ಹಾಗೂ ಪ್ರೋತ್ಸಾಹಕರ ಬಹುಮಾನವನ್ನು ನೀಡಲಾಗುವುದು.
- ಆಯ್ಕೆಯಾದ ಕವನಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕವನ ವಾಚನಕ್ಕೆ ಅವಕಾಶವಿರುವುದು.( ಸಮಯದ ಹೊಂದಾಣಿಕೆ ನೋಡಿ ಕೊಂಡು)
- ಕವನಗಳನ್ನು ಅಕ್ಟೋಬರ್ 10ರ ಒಳಗಾಗಿ , ಕಾರ್ಯಕ್ರಮದ ಸಂಯೋಜಕರಾದ ಶ್ರೀ ನಾರಾಯಣ ಕುಂಬ್ರ, ಸಂಚಾಲಕರು ಗ್ರಾಮ ಸಾಹಿತ್ಯ ಸಂಭ್ರಮ,ವಿವೇಕಾನಂದ ಕಾಲೇಜು ನೆಹರು ನಗರ ಪುತ್ತೂರು. ದಕ್ಷಿಣ ಕನ್ನಡ 574203ಈ ವಿಳಾಸಕ್ಕೆ ಕಳುಹಿಸತಕ್ಕದ್ದು.
- ವಿಜೇತರಿಗೆ ದಿನಾಂಕ:01.11.2025ರಂದು ನಂದಗೋಕುಲ ವೇದಿಕೆ ಗೋಕುಲ ಬಡಾವಣೆ,
ಮುಕ್ರಂಪಾಡಿ ಇಲ್ಲಿ ಮಧ್ಯಾಹ್ನ 2.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದೆಂದು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.