ಕಾರ್ಕಳ: ಎನ್ ಎಸ್ ಎ ಎಂ ಎಫ್ ಜಿ ಸಿ ನಿಟ್ಟೆ ಕಾಲೇಜು ಎನ್ ಎಸ್ ಎಸ್ ಟೀಮ್ ವಿಜೇತ ವಿಶೇಷ ಶಾಲೆಗೆ ಭೇಟಿ ನೀಡಿ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಿದರು ಹಾಗೂ ದಿನಸಿ ವಸ್ತುಗಳನ್ನು ಹಸ್ತಾಂತರಿಸಿದರು ಹಾಗೂ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿದರು.

ಈ ಸಂದರ್ಭದಲ್ಲಿ ಎನ್ ಎಸ್ ಎಸ್ ಯೋಜನಾಧಿಕಾರಿಗಳಾದ ನಮಿರಾಜ್, ಸೌಮ್ಯ ಶ್ರೀ, ದಿವ್ಯಾಕ್ಷ್, ನಾಯಕ್ ಚಿನ್ಮಯ್ ಸದಾನಂದ್, ರೀತು, ಸೆಕ್ರೆಟರಿ ತಂಶೀರ್, ಮನಿಷ, ಶಮಂತ್, ಶ್ರಾವ್ಯ, ಶರತ್, ಖುಷಿ, ಉಪಸ್ಥಿತರಿದ್ದರು.

ವಿಶೇಷ ಶಿಕ್ಷಕಿ ಹರ್ಷಿತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಮ್ಯಾನೇಜಿಂಗ್ ಟ್ರಸ್ಟಿ ಹರೀಶ್ ಸ್ವಾಗತಿಸಿ ವಿಶೇಷ ಶಿಕ್ಷಕಿ ಶ್ರೀನಿಧಿ ವಂದಿಸಿದರು.

