ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಕಾಂತರಾ ಸಿನಿಮಾದ ನಾಯಕ ನಟರಾದ ರಿಷಬ್ ಶೆಟ್ಟಿ ದಂಪತಿಗಳು ಭೇಟಿ

0
31

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಕಾಂತರಾ ಸಿನಿಮಾದ ನಾಯಕ ನಟರಾದ ರಿಷಬ್ ಶೆಟ್ಟಿ ದಂಪತಿಗಳು ಭೇಟಿಯಿತ್ತು ಶ್ರೀ ವಿನಾಯಕನಿಗೆ ಪ್ರಿಯವಾದ 125 ತೆಂಗಿನಕಾಯಿ ಮೂಡು ಗಣಪತಿ ಸೇವೆಯನ್ನು ಹರಕೆ ರೂಪದಲ್ಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿಗಳು ಶ್ರೀಯುತ ಕೆ ರಮಣ ಉಪಾಧ್ಯಾಯರು ರಿಷಬ್ ಶೆಟ್ಟಿ ದಂಪತಿಗಳನ್ನು ಆದರಿಂದ ಬರಮಾಡಿಕೊಂಡು ಶ್ರೀ ದೇವಳದಿಂದ ಗೌರವ ಸಮರ್ಪಣೆಯನ್ನು ಮಾಡಿದರು. ಪರ್ಯಾಯ ಅರ್ಚಕರಾದ ಕೆ. ವ್ಯಾಸ ಉಪಾಧ್ಯಾಯ ಸಹೋದರರು ದೇವರ ವಿಶೇಷ ಸಿರಿಮುಡಿಗಂಧ ಪ್ರಸಾದವನ್ನು ನೀಡಿ ಆಶೀರ್ವದಿಸಿದರು.

ವಿಶ್ರಾಂತ ಆಡಳಿತ ಧರ್ಮದರ್ಶಿಗಳಾದ ಕೆ. ಸೂರ್ಯನಾರಾಯಣ ಉಪಾಧ್ಯಾಯ ಹಾಗೂ ಧರ್ಮದರ್ಶಿಗಳಾದ ಕೆ.ಪದ್ಮನಾಭ ಉಪಾಧ್ಯಾಯರು, ಶ್ರೀದೇವಳದ ಆಡಳಿತ ಹಾಗೂ ಅರ್ಚಕ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here