ಕಾಂತಾವರ : ಮದಕ ಓಂ ಶ್ರೀ ಹಳೆವಿದ್ಯಾರ್ಥಿ ಸಂಘದಿಂದ ಕ್ರೀಡಾಕೂಟ. ವಾರ್ಷಿಕೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ.

0
90

ಮದಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಓಂ ಶ್ರೀ ಹಳೆವಿದ್ಯಾರ್ಥಿ ಸಂಘದಿಂದ ಕ್ರೀಡಾಕೂಟವನ್ನು ಓಂ ಶ್ರೀ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಗೀತಾ ಅರ್.ನಾಯಕ್ ಮದಕ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಶಾಲಾ ಹಿತೈಷಿಗಳಾದ ಎಂ ಸಂಜೀವ ಕೋಟ್ಯಾನ್ ಮಿತ್ತಲಚ್ಚಿಲು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ನವೆಂಬರ್ 15 ರಂದು ಜರಗುವ ಶಾಲಾ ವಾರ್ಷಿಕೋತ್ಸವದ ಅಮಂತ್ರಣ ಪತ್ರಿಕೆ ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಜೆಸಿಂತಾ ಡಿಸೋಜ, ಎಸ್.ಡಿ.ಎಂ.ಸಿ ಸಮಿತಿ ಅಧ್ಯಕ್ಷೆ ರಂಜಿತಾ, ಶಾಲಾ ಶಿಕ್ಷಕರಾದ ಪ್ರೆಸಿಲ್ಲಾ , ಅಂಗನವಾಡಿ ಕಾರ್ಯಕರ್ತೆ ಸುಜಾತ ಕೋಟ್ಯಾನ್, ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷ ಜಗದೀಶ್ ಕೋಟ್ಯಾನ್, ಹಿರಿಯರಾದ ವಿಜಯ ಪೂಜಾರ್ತಿ, ಸ್ಥಳೀಯರಾದ ಸಂಜೀವ ಕೋಟ್ಯಾನ್ ಕಡತ್ರಬೈಲು ಉಪಸ್ಥಿತರಿದ್ದರು.
ಓಂ ಶ್ರೀ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಸುಕೇಶ್ ಕೋಟ್ಯಾನ್ ಕಾಂತಾವರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here