ಮುಲ್ಕಿ: ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಪೂರ್ವಿಕರ ಕಾಲದಲ್ಲಿ ಹಲವಾರು ವಿಧಿ ನಿಯಮಗಳು ಇತ್ತು. ಅದರಂತೆ ಕಾಂತು ಸೇವೆಗಾರರ ಮನೆತನದವರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂರ್ವಿಕರ ಕಾಲದಿಂದ ಆಡಳಿತದಲ್ಲಿಯೂ ಇವರ ಸ್ಥಾನಮಾನ ಇತ್ತೆಂದು ತಿಳಿದುಬರುತ್ತದೆ. ಅದರಂತೆ ಕೆಲವು ಸೇವೆಯನ್ನು ಮಾಡುತ್ತಾ ಬಂದಿದ್ದರು. ಆ ಕಾಲದಲ್ಲಿ ಒಂಬತ್ತು ಮಾಗಣೆಯ ಅರಸು ಕಂಬಳದ ಗದ್ದೆಗೆ ಕಾಂತು ಸೇವೆಗಾರರ ಕೋಣಗಳು ಮೊದಲು ಇಳಿಯಬೇಕೆಂಬ ನಿಯಮ ಇದೆ. ಅದು ಈಗಲೂ ನಡೆದುಕೊಂಡು ಬಂದಿದೆ. ಕಾಂತು ಸೇವೆಗಾರರ ಮನೆಯು ಪೂರ್ವಿಕರ ಕಾಲದಲ್ಲಿ ಯಾವುದೋ ಒಂದು ಘಟನೆಯಿಂದ ಅಲ್ಲಿ ನಡೆಯಬೇಕಾಗಿದ್ದ ಧರ್ಮ ದೈವಗಳ ಸೇವೆಗಳು ನಿಂತುಹೋಯಿತು. ಒಂಬತ್ತು ಮಾಗಣೆಯ ಬಿಲ್ಲವರ ಪ್ರಸಿದ್ಧ ಮನೆತನವನ್ನು ಅಜೀರ್ಣ ಅವಸ್ಥೆಯಲ್ಲಿ ಬಿಡುವುದು ಸರಿಯಲ್ಲವೆಂದು ಜೀರ್ಣೋದ್ಧಾರ ಮಾಡುವ ಉದ್ದೇಶದಿಂದ ಊರಿನ ಕೆಲವು ದೈವ ಭಕ್ತರು ಮುಂದೆ ಬಂದು ಕಾಂತು ಸೇವೆಗಾರ ಧರ್ಮ ಚಾವಡಿ ಟ್ರಸ್ಟ್ ಒಂದನ್ನು ಸ್ಥಾಪಿಸಿದರು.
ಇದರ ಸದಸ್ಯರೆಲ್ಲ ಸೇರಿ ಟ್ರಸ್ಟ್ ನ ಅಧ್ಯಕ್ಷರಾಗಿ ವಾಸು ಎಸ್.ಪೂಜಾರಿಯವರನ್ನು ಆಯ್ಕೆ ಮಾಡಿದರು. ಪ್ರಧಾನ ಕಾರ್ಯದರ್ಶಿ : ಹೆಚ್. ವಾಸು ಪೂಜಾರಿ, ಚಿತ್ರಾಪು, ಮತ್ತು ಕೋಶಾಧಿಕಾರಿ : ವಿಶಾಲ್ ಕಕ್ವ-ಕೊಲಕಾಡಿ ಬರ್ಕೆ.
ಗೌರವಾಧ್ಯಕ್ಷರು : ಮಹೇಶ್ ಶಾಂತಿ, ಕಾಂತು ಸೇವೆಗಾರ ಗಡಿ ಪ್ರಧಾನರು, ಜಗನ್ನಾಥ ವಿ. ಕೋಟ್ಯಾನ್, ಸೂರ್ಯಕಾಂತ್ ಜೆ. ಸುವರ್ಣ, ಶರತ್ ಸಾಲ್ಯಾನ್, ದಾಮೋದರ ದಂಡಕೇರಿ, ರಾಜಶೇಖರ ಕೋಟ್ಯಾನ್, ಹರೀಶ್ ಅಮೀನ್ ಮುಂಬೈ, ಲೀಲಾಕ್ಷ ಕರ್ಕೇರ (ನಮ್ಮ ಕುಡ್ಲ), ಡಾ|| ಹರಿಶ್ಚಂದ್ರ ಪಿ ಸಾಲ್ಯಾನ್, ಮುಲ್ಕಿ.
ಉಪಾಧ್ಯಕ್ಷರು: ಸತ್ಯಜೀತ್ ಸುರತ್ಕಲ್, ಮೋಹನ್ ದಾಸ್ ಹೆಜಮಾಡಿ, ಗುರುರಾಜ್ ಎಸ್ ಪೂಜಾರಿ ತೋಕೂರು, ಸತೀಶ್ ಅಂಚನ್ ಬಾಳೆಹಿತ್ಲು, ಧನಂಜಯ ಕೋಟ್ಯಾನ್ ಮಟ್ಟು, ವಾಸುದೇವ ಎಂ ಸಾಲ್ಯಾನ್, ಕೊಲಕಾಡಿ (ಮುಂಬೈ), ಗಂಗಾಧರ ಕೋಟ್ಯಾನ್, ಮುಲ್ಕಿ ನಾಗೇಶ ಪ್ರಸಾದ್(ಚೆನ್ನೈ). ಜತೆ ಕಾರ್ಯದರ್ಶಿ : ಮಹೇಶ್ ಕುಮಾರ್, ಅಶೋಕ್ ಕರ್ಕೇರ, ಭಾಸ್ಕರ್ ಸಾಲ್ಯಾನ್ ಮುಲ್ಕಿ, ದಿವ್ಯಾ ಎಸ್ ಕೋಟ್ಯಾನ್. ಜತೆ ಕೋಶಾಧಿಕಾರಿ : ರಮಾನಂದ ಪಡುಬೈಲ್, ಜನಾರ್ಧನ ಪೂಜಾರಿ, ಕೆ ಎಸ್ ರಾವ್ ನಗರ. ಅವರು ನೇಮಕ ಆಗಿದ್ದಾರೆ

