ಕನ್ಯಾಡಿ : 22ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವದಂದು ಕನ್ಯಾಡಿ-II ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯವರಿಂದ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಕನ್ಯಾಡಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡಕ್ಕೆ ರೂ. 33,333/- ದೇಣಿಗೆಯನ್ನು ನೀಡಿ ಕಟ್ಟಡದ ನಿರ್ಮಾಣ ಶೀಘ್ರವಾಗಿ ನೆರವೇರುವಂತೆ ಶುಭಹಾರೈಸಿದರು. ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ ವಿನಾಯಕರಾವ್ ರವರು ಸಂಸ್ಥೆಯ ಪರವಾಗಿ ದೇಣಿಗೆಯನ್ನು ಸ್ವೀಕರಿಸಿ ಧನ್ಯವಾದವಿತ್ತರು.
ಈ ಸಂಧರ್ಭದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಭಾಕರ್ ಗೌಡ ಬೊಳ್ಮ, ಉಪಾಧ್ಯಕ್ಷರಾದ ಶ್ರೀ ಯತೀಶ್ ಸುವರ್ಣ, ಸಂಯೋಜಕರಾದ ಶ್ರೀ ರಾಜೇಂದ್ರ ಅಜ್ರಿ, ಉದ್ಘಾಟಕರಾದ ಶ್ರೀ ಲಯನ್ ದೇವದಾಸ ಎಲ್ ಶೆಟ್ಟಿ ಹಿಬರೋಡಿ, ಸೌತಡ್ಕ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸತ್ಯಪ್ರಿಯ ಕಲ್ಲುರಾಯ, ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿಮಲಾ ಪರಮೇಶ್ವರ, ಶಿವ ಪಾರ್ವತಿ ಕಲ್ಯಾಣ ಮಂಟಪ ಮಾಲಕರು ಶ್ರೀ ಗಿರೀಶ್ ಕುದ್ರೆಂತ್ತಾಯ,ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷರಾದ ಶ್ರೀ ದೇವಸ್ಯ ಟಿ , ಬೃಂದಾವನ ಮನೆ ಕನ್ಯಾಡಿ 2 ಶ್ರೀಮತಿ ಪವಿತ್ರ ಸುಕುಮಾರ ಶೆಟ್ಟಿ, ಧರ್ಮಸ್ಥಳ ಗ್ರಾ.ಪಂ. ಸದಸ್ಯರಾದ ಶ್ರೀ ವಸಂತ ನಾಯ್ಕ, ಶ್ರೀಮತಿ ರೇವತಿ, ಶ್ರೀ ಕೆ ನಂದ ಅಧ್ಯಕ್ಷರು ಎಸ್ ಡಿ ಎಂ ಸಿ , ಕನ್ಯಾಡಿ -2 ಪ್ರ.ಮು.ಶಿ ಶ್ರೀಮತಿ ಪುಷ್ಪಾ ಎನ್ ರವರು ಉಪಸ್ಥಿತರಿದ್ದರು.