ಕನ್ಯಾನ ಡೈರಿ ಚುನಾವಣೆ : ಹೆಬ್ರಿ ಪ್ರವೀಣ್‌ ಬಲ್ಲಾಳ್‌ ತಂಡ ಅವಿರೋಧ ಆಯ್ಕೆ.

0
4

ಹೆಬ್ರಿ : ಹೆಬ್ರಿಯ ಕನ್ಯಾನ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಂದಿನ ೫ ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಹೆಬ್ರಿ ಪ್ರವೀಣ್‌ ಬಲ್ಲಾಳ್‌ ನೇತ್ರತ್ವದ ಕಾಂಗ್ರೆಸ್‌ ಬೆಂಬಲಿತರ ೧೧ ಮಂದಿಯ ತಂಡ ಭರ್ಜರಿ ಅವಿರೋಧವಾಗಿ ಆಯ್ಕೆಯಾಗಿದೆ.


ಡೈರಿಯ ನೂತನ ಅಧ್ಯಕ್ಷರಾಗಿ ಹರೀಶ ನಾಯಕ್‌ ಮತ್ತು ಉಪಾಧ್ಯಕ್ಷರಾಗಿ ಶಕುಂತಳಾ ಶೆಟ್ಟಿ ಆಯ್ಕೆಯಾದರು. ಬಳಿಕ ನಡೆದ ಅಭಿನಂದನ ಸಮಾರಂಭದಲ್ಲಿ ನೂತನ ಆಡಳಿತ ಮಂಡಳಿಯನ್ನು ಕಾಂಗ್ರೆಸ್‌ ಮುಖಂಡ ಪ್ರವೀಣ್‌ ಬಲ್ಲಾಳ್‌, ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋಪಿನಾಥ ಭಟ್‌, ಪ್ರಚಾರ ಸಮಿತಿ ಅಧ್ಯಕ್ಷ ನವೀನ್‌ ಕೆ ಅಡ್ಯಂತಾಯ, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಶಂಕರ ಶೇರಿಗಾರ್‌, ಸ್ಥಳೀಯ ಪ್ರಮುಖರಾದ ಎಚ್.ಜನಾರ್ಧನ್‌, ಕನ್ಯಾನ ಸಂತೋಷ ನಾಯಕ್‌ ಸೇರಿದಂತೆ ಪಕ್ಷದ ವಿವಿಧ ಪ್ರಮುಖರು ಉಪಸ್ಥಿತರಿದ್ದು ಅಭಿನಂದಿಸಿದರು.
ರಮ್ಯಾ ನಾಯಕ್‌, ರೇವತಿ ಶೆಟ್ಟಿ, ಮಧುರಾ ಶೆಟ್ಟಿ, ಉದಯ ಪೂಜಾರಿ, ರಾಮಣ್ಣ ಶೆಟ್ಟಿ, ಕೃಷ್ಣ ನಾಯ್ಕ್‌, ಭಾರತಿ ಶೇರಿಗಾರ್‌, ಭುಜಂಗ ಶೆಟ್ಟಿ, ಗುಲಾಬಿ ಹಾಂಡ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದರು.

LEAVE A REPLY

Please enter your comment!
Please enter your name here