ಕಾಪು : ಮನೆ ಕಳವು ಪ್ರಕರಣ ಸಂಬಂಧ ಅಂತರಾಜ್ಯ ಕಳವು ಆರೋಪಿಯೊಬ್ಬನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಮಲ್ಲಾರು ಗ್ರಾಮದ ಫಕೀರ್ಣ ಕಟ್ಟೆಯ ಮೂಲದ ಪ್ರಸ್ತುತ ತಮಿಳುನಾಡು ಕನ್ಯಾಕುಮಾರಿಯ ಉಮೇಶ್ ಬಳೆಗಾರ ಯಾನೆ ಉಮೇಶ್ ಪಿ ಯಾನೆ ಉಮೇಶ್ ರೆಡ್ಡಿ(47) ಎಂದು ತಿಳಿದು ಬಂದಿದೆ.
ಡಿ.4 ರಂದು ಕಾಪು ಮಲ್ಲಾರು ಗ್ರಾಮದ ರಾಘವೇಂದ್ರ ಕಿಣಿ ಎಂಬವರ ಮನೆಗೆ ನುಗ್ಗಿದ ಕಳ್ಳರು, ಕಪಾಟಿನಲ್ಲಿದ್ದ 72 ಗ್ರಾಂ ತೂಕದ ಚಿನ್ನಾಭರಣ ಹಾಗೂ 1,500 ರೂ. ಮೌಲ್ಯದ ಬೆಳ್ಳಿ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಯೋರ್ವನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

