ಕರಾಡ ಬ್ರಾಹ್ಮಣ ಮಹಾಸಭೆ: ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ತುರ್ತು ಪರಿಹಾರ ವಿತರಣೆ

0
58

ಮೂಡುಬಿದಿರೆ: ಮೂಡುಬಿದಿರೆ ಸಮೀಪದ ಕರಾಡ ಬ್ರಾಹ್ಮಣ ಸುಧಾರಕ ಸಂಘ, ಶ್ರೀನಿವಾಸಪುರ, ಗುಂಡ್ಯಡ್ಕ, ಪುತ್ತಿಗೆ ಇದರ 56ನೇ ವರ್ಷದ ಮಹಾಸಭೆ ಸಮಾಜದ ಸರ್ವರ ಸಹಕಾರದೊಂದಿಗೆ ಯಶಸ್ವಿಯಾಗಿ ನೆರವೇರಿತು.
1968ರಲ್ಲಿ ಆರಂಭವಾದ ಸಂಘವು ಇಂದು ದೇಶದಾದ್ಯಂತ ಸದಸ್ಯರನ್ನು ಹೊಂದಿದ್ದು, ಸಂಘವು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಇದರ ಅಜೀವ ಸದಸ್ಯತ್ವವನ್ನು ಹೊಂದಿದೆ. ಸಂಘವು ವಿದ್ಯಾರ್ಥಿ ವೇತನ, ವೈದ್ಯಕೀಯ ತುರ್ತು ನೆರವು, ಸಾಧಕರ ಸನ್ಮಾನ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹೀಗೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ದುಡಿಯುತ್ತಿದೆ.

ಸನ್ಮಾನ

ಈ ಬಾರಿ ಮಹಾಸಭೆಯಲ್ಲಿ ಹತ್ತನೇ ತರಗತಿಯಲ್ಲಿ ಸಾಧನೆ ಮಾಡಿದ ಐವರು ವಿದ್ಯಾರ್ಥಿಗಳು, ಪದವಿಪೂರ್ವ ಶಿಕ್ಷಣದಲ್ಲಿ ಸಾಧನೆ ಮಾಡಿದ ನಾಲ್ಕು ವಿದ್ಯಾರ್ಥಿಗಳು, ಪದವಿ ಶಿಕ್ಷಣದಲ್ಲಿ ಸಾಧನೆ ಮಾಡಿದ ಅಭಿಷೇಕ್ ಆರ್. ಪಂಡಿತ್ ಮತ್ತು ಅಂಕಿತ ಚಿಂಚಲ್ಕರ್ ಇವರನ್ನು ಸನ್ಮಾನಿಸಲಾಯಿತು.
ಮಹಾಸಭೆಯಲ್ಲಿ ಕರಾಡ ಬ್ರಾಹ್ಮಣ ಸುಧಾರಕ ಸಂಘ ಇದರ ಆಡಳಿತ ಮಂಡಳಿ, ಕಾರ್ಯಕಾರಿ ಮಂಡಳಿ, ಸಲಹಾ ಸಮಿತಿ, ವೈದಿಕ ಘಟಕ, ಮಹಿಳಾ ಘಟಕ, ಯುವ ಘಟಕ, ಸಂಘದ ಸದಸ್ಯರು, ಆಮಂತ್ರಿತರು, ಅತಿಥಿಗಳು ಉಪಸ್ಥಿತರಿದ್ದರು.
ಪ್ರಸ್ತುತ ಆರ್ಥಿಕ ವರ್ಷದಲ್ಲಿ ಸುಮಾರು 11 ಮಂದಿಗೆ ಪ್ರತಿಭಾ ಪುರಸ್ಕಾರ, 11 ಮಂದಿಗೆ ವಿದ್ಯಾರ್ಥಿವೇತನ, ಹಾಗೂ ಐದು ಮಂದಿಗೆ ತುರ್ತು ಪರಿಹಾರ, ನೀಡಲಾಗಿದ್ದು, ಮುಂದಿನ ವರ್ಷಗಳಲ್ಲಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕರಾಡ ಬ್ರಾಹ್ಮಣ ಸುಧಾರಕ ಸಂಘ ಗುಂಡ್ಯಡ್ಕ ಉದ್ದೇಶಿಸಿದ್ದು, ಸಮಾಜದ ಸರ್ವರೂ ಸಹಕರಿಸುವಂತೆ ಆಮಂತ್ರಣ ಪತ್ರದಲ್ಲಿ ವಿನಂತಿಸಲಾಗಿದೆ.

ವರದಿ :- ಮಂದಾರ ರಾಜೇಶ್ ಭಟ್

LEAVE A REPLY

Please enter your comment!
Please enter your name here