ಕರಿಮಣೇಲು ಬ್ರೈಟ್ ಹೊರೈಸನ್ ಅಂತರ್ ರಾಷ್ಟ್ರೀಯ ಶಾಲೆಯ ಪ್ರಾರಂಭೋತ್ಸವ

0
10

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಕರಿಮಣೇಲು ಗ್ರಾಮದಲ್ಲಿ ನೂತನ ಬ್ರೈಟ್ ಹೊರೈಸನ್ ಅಂತರಾಷ್ಟ್ರೀಯ ಶಾಲೆಯ ಪ್ರಾರಂಭೋತ್ಸವ ಏಪ್ರಿಲ್ 8ರಂದು ನಡೆಯಿತು. ಪೂಜಾ ವಿಧಿ ವಿಧಾನಗಳ ತರುವಾಯ ವೇಣೂರು ಮಹಾಲಿಂಗೇಶ್ವರ ದೇವಾಲಯದ ಆಡಳಿತ ಮಕ್ತೇಸರ ಜಯರಾಮ ಶೆಟ್ಟಿ ಹಾಗೂ ಪದ್ಯಾರಬೆಟ್ಟು ದೇವಳದ ಆಡಳಿತ ಮುಕ್ತೈಸರ ಜೀವಂಧರ ಕುಮಾರ್ ಅವರುಗಳು ಟೇಪ್ ಕತ್ತರಿಸಿ, ದೀಪ ಬೆಳಗಿ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯಸ್ಥ ಡಾ.ಶರತ್ ಗೋರೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಆಡಳಿತ ಮಂಡಳಿಯ ರಂಜಿತ್ ಪೂಜಾರಿ, ಶಶಿಧರ್ ಶೆಟ್ಟಿ, ಇರ್ಫಾನ್, ರಾಜೇಶ್ ಶೆಟ್ಟಿ ಹಾಗೂ ಇತರರು ಹಾಜರಿದ್ದರು.

ಸ್ಥಳೀಯ ವಿದ್ಯಾರ್ಥಿಗಳಿಗೆ ಬಸ್ಸು ಸೌಲಭ್ಯ ಇದ್ದು, ಪರ ಸ್ಥಳೀಯರಿಗೆ ಹಾಸ್ಟೆಲ್ ಸೌಲಭ್ಯ ಇರುತ್ತದೆ. ಉತ್ತಮ ಕಲಿಕೆಗಾಗಿ ಎಐ ಕ್ಲಾಸ್ ರೂಮ್ಗಳು, ವಿಜ್ಞಾನ, ಗಣಿತ, ಭಾಷೆಯ ಹಾಗೂ ಕಂಪ್ಯೂಟರ್ ಕಲಿಕಾ ಲ್ಯಾಬ್ ಗಳು, ಉತ್ತಮ ಪುಸ್ತಕಾಲಯ, ಆಟೋಟ ಹಾಗೂ ಸಾಂಸ್ಕೃತಿಕ ತರಬೇತಿಗಳು, ಆರೋಗ್ಯಯುತ ಸುರಕ್ಷಿತ ಪರಿಸರ, ವೈವಿಧ್ಯಮಯ ಕಲಿಕೆಗಾಗಿ ವಿವಿಧ ಕ್ಲಬ್ ಗಳು ಈಗಾಗಲೇ ಕಾರ್ಯಾಚರಿಸುತ್ತಿವೆ.

ವರದಿ ರಾಯಿ ರಾಜ ಕುಮಾರ

LEAVE A REPLY

Please enter your comment!
Please enter your name here