78ನೇ ವರ್ಷದ ಶ್ರೀ ರಾಮ ಭಜನೆಯು ನ.02 ರಂದು ಅತ್ತೂರು ದೂಪದಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜರಗಲಿರುವುದು.
ಪ್ರತಿದಿನ ಸಾಯಂಕಾಲ ಗಂಟೆ 7ಕ್ಕೆ ಪ್ರಾರಂಭವಾಗಿ ಗಂಟೆ 8ರವೆರೆಗೆ ಜರುಗಲಿದೆ. ಏಕಾದಶಿ ದಿವಸ ಸೂರ್ಯೋದಯಕ್ಕೆ ಪ್ರಾರಂಭವಾಗಿ ರಾತ್ರಿ 12ಕ್ಕೆ ಮಂಗಲ ಪ್ರಸಾದ ವಿತರಣೆ ನಡೆಯಲಿದೆ. ಶ್ರೀ ದೇವರ ಶ್ರೀ ಮುಡಿ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ದಿ| ಪುಂಡಲೀಕ ಕುಡ್ವ ಇವರ ಮಕ್ಕಳು ಮತ್ತು ಮೊಮ್ಮಕ್ಕಳು ಹಾಗೂ ಭಜಕ ವೃಂದ ವಿನಂತಿಸಿದ್ದಾರೆ.