ಅಕ್ಟೋಬರ್ 03 ಶುಕ್ರವಾರದಂದು ನಮ್ಮನ್ನು ಅಗಲಿದ ಕಾರ್ಕಳ ಬಿಜೆಪಿಯ ಹಿರಿಯ ಮುಖಂಡರು, ಖ್ಯಾತ ನ್ಯಾಯವಾದಿಗಳಾದ ಶ್ರೀ ಎಂ ಕೆ ವಿಜಯ್ ಕುಮಾರ್ ರವರು ಕಾರ್ಕಳ ಬಿಜೆಪಿಗೆ, ಸಮಾಜಕ್ಕೆ ನೀಡಿದ ಕೊಡುಗೆ ಅಪಾರ.
ಶ್ರೀಯುತರ ಆತ್ಮಕ್ಕೆ ಸದ್ಗತಿ ಕೋರಿ ಕಾರ್ಕಳ ಬಿಜೆಪಿ ಮಂಡಲದ ವತಿಯಿಂದ ಶ್ರೀ ಬಿ ಮಂಜುನಾಥ ಪೈ ಸಭಾಂಗಣದಲ್ಲಿ ಅಕ್ಟೋಬರ್ 25 ರಂದು ಬೆಳಿಗ್ಗೆ 10.00 ಗಂಟೆಗೆ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಉಡುಪಿ ದಕಿಣ ಕನ್ನಡ ಜಿಲ್ಲೆಯ ಬಿಜೆಪಿ ಹಿರಿಯರು, ಶಾಸಕರು, ಪ್ರಮುಖ̧ರು ಭಾಗವಹಿಸಲಿದ್ದಾರೆ.
ಎಂ ಕೆ ವಿಜಯ ಕುಮಾರ್ ರವರ ಅಭಿಮಾನಿಗಳು, ಪಕ್ಷದ ಹಿರಿಯರು, ಕಾರ್ಯಕರ್ತರು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಗಲಿದ ಹಿರಿಯ ಚೇತನಕ್ಕೆ ನಮನ ಸಲ್ಲಿಸಬೇಕಾಗಿ ವಿನಂತಿ
ಬಿಜೆಪಿ ಕಾರ್ಕಳ