ಕಾರ್ಕಳ:ಗಾಂಧಿ ಜಯಂತಿ ಪ್ರಯುಕ್ತ ಸಾರ್ವಜನಿಕ ಹಿಂದೂ ರುದ್ರ ಭೂಮಿ ಕರಿಯಕಲ್ಲು ಹಾಗೂ ರೋಟರಿ ಕ್ಲಬ್ ಕಾರ್ಕಳ ಇದರ ಜಂಟಿ ಆಶ್ರಯದಲ್ಲಿ ಪ್ರಯಾಣಿಕರ ಬಸ್ಸು ತಂಗುದಾಣಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಅಧ್ಯಕ್ಷ ಕೆ. ನವೀನ್ ಚಂದ್ರ ಶೆಟ್ಟಿ, “ಗಾಂಧಿಜಿಯವರ ಕನಸಾದ ಸ್ವಚ್ಛ ಭಾರತದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ತಮ್ಮ ಕೈಜೋಡಿಸಬೇಕು. ಸಾರ್ವಜನಿಕ ಸ್ಥಳಗಳ ಶುದ್ಧತೆಗೆ ಎಲ್ಲರೂ ಹೊಣೆಗಾರರಾಗಿರಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಂಗಮ್ಮ ಎಂಬ ಮಹಿಳೆ ಹಾಗೂ ಅಭಿಷೇಕ್ ಎಂಬ ಯುವಕ ಅವರು ರೋಟರಿ ಪಾರ್ಕಿನಲ್ಲಿ ನೀರುಣಿಸುವ ಮತ್ತು ಗಿಡಗಳನ್ನು ಪೋಷಿಸುವ ಸೇವೆಗೆ ಶಾಲು ಹೊದಿಸಿ ಗೌರವ ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟೇರಿಯನ್ ಹರಿಪ್ರಕಾಶ್ ಶೆಟ್ಟಿ, ಇಕ್ಬಾಲ್ ಅಹಮದ್, ಸುರೇಶ ನಾಯಕ್, ಬಾಲಕೃಷ್ಣ ದೇವಾಡಿಗ, ಚೇತನ್ ನಾಯಕ್ ಹಾಗೂ ಕೌನ್ಸಿಲರ್ ಪ್ರಕಾಶ್ ರಾವ್ ಮತ್ತು ಅವರ ತಂಡದ ಸದಸ್ಯರು ಹಾಜರಿದ್ದರು.