ಕುಕ್ಕುಂದೂರು ಗ್ರಾಮದ ಗ್ರೀನ್‌ಲ್ಯಾಂಡ್ ಫ್ಯಾಕ್ಟರಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪಾದಚಾರಿಯೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟ ಘಟನೆ ಡಿಸೆಂಬರ್ 10 ರಂದು ವರದಿಯಾಗಿದೆ. ಮೃತಪಟ್ಟವರನ್ನು ದಿನಕರ ಪೂಜಾರಿ (50) ಎಂದು ಗುರುತಿಸಲಾಗಿದೆ.
ದಿನಕರ ಪೂಜಾರಿಯವರು ಅಯ್ಯಪ್ಪನಗರ ಕಡೆಯಿಂದ ಜಾರ್ಕಳ ಕಡೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ, ನಾಗೇಶ್ ಪೈ ಎಂಬುವವರು ಇನ್ನೋವಾ ಕಾರನ್ನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ದಿನಕರ ಪೂಜಾರಿಯವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ದಿನಕರ ಪೂಜಾರಿಯವರು ಡಾಮಾರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆ ತರುವ ದಾರಿ ಮಧ್ಯೆ ಮೃತಪಟ್ಟಿರುತ್ತಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

