ಸಾರ್ವಜನಿಕ ಶ್ರೀ ಸತ್ಯಸಾರಾಮಣಿ ಹಲೇರಾ ಪಂಜುರ್ಲಿ ಮತ್ತು ಪರಿವಾರ ದೈವಗಳ ಕ್ಷೇತ್ರ ಸಮಿತಿ (ರಿ.) ದಿನಾಂಕ 16-02-2026 ನೇ ಸೋಮವಾರದಿಂದ 18-02-2026ನೇ ಬುಧವಾರದವರೆಗೆ ಏಳನೇ ವರ್ಷದ ವರ್ಧಂತಿ ಪ್ರಯುಕ್ತ ಗಗ್ಗರ ಸೇವೆಯು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಕೆ.ಕಿಶೋರ್ ಶಾಂತಿ ಇವರ ನೇತೃತ್ವದಲ್ಲಿ ಜರಗಲಿರುವುದು.
ಕಾರ್ಯಕ್ರಮಗಳು :
16-02-2026ನೇ ಸೋಮವಾರ – ಸಂಜೆ ಗಂಟೆ 7.15 ರಿಂದ ರಾತ್ರಿ ಗಂಟೆ 8.00 ರವರೆಗೆ ಸಮಿತಿಯ ಮಹಿಳಾ ಸದಸ್ಯರಿಂದ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿರುವುದು. ರಾತ್ರಿ 9.00 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
17-02-2026ನೇ ಮಂಗಳವಾರ – ಬೆಳಿಗ್ಗೆ 8-05 ಕ್ಕೆ ದೇವತಾ ಪಾರ್ಥನೆ, ನಾಗದೇವರಿಗೆ ತನು ಪಂಚಾಮೃತ, ತಂಬಿಲ ಸೇವೆ ಬೆಳಿಗ್ಗೆ 9.05 ರಿಂದ ಗಣಹೋಮ , ಬೆಳಿಗ್ಗೆ 10.05 ಕ್ಕೆ ರಿಂದ ತೋರಣ ಮುಹೂರ್ತ, ಬೆಳಿಗ್ಗೆ 10.30 ರಿಂದ ನವಕ ಕಲಶ ಪ್ರಧಾನ ಹೋಮ, ಬೆಳಿಗ್ಗೆ 11.30 ರಿಂದ ಕಲಶಾಭಿಷೇಠ, ದೈವಗಳಿಗೆ ಪರ್ವ ಪ್ರಸನ್ನ ಪೂಜೆ, ಪ್ರಸಾದ ವಿತರಣೆ , ರಾತ್ರಿ 9.00 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ. ರಾತ್ರಿ ಗಂಟೆ 10.00ರಿಂದ ಸತ್ಯಸಾರಮಣಿ ಹಲೇರಾ ಪಂಜುರ್ಲಿ ದೈವಗಳಿಗೆ ಗಗ್ಗರ ಸೇವೆ ತದನಂತರ ಒಂಟಗುಳಿಗ, ಚಾಮುಂಡಿ ಗುಳಿಗ ದೈವಗಳ ಗಗ್ಗರ ಸೇವೆ ನಡೆಯಲಿರುವುದು.
18-02-2026ನೇ ಬುಧವಾರ- ರಾತ್ರಿ ಗಂಟೆ 9.00ಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ 9.30ರಿಂದ ಮಂತ್ರದೇವತೆ ದೈವದ ಗಗ್ಗರ ಸೇವೆ ತದನಂತರ ಮಹಾಂಕಾಳಿ ದೈವದ ಗಗ್ಗರ ಸೇವೆ ನಡೆಯಲಿರುವುದು.

