ಕಾರ್ಕಳ: ಮೆಸ್ಕಾಂ ಅಧಿಕಾರಿ ಗಿರೀಶ್ ರಾವ್ ಮನೆ ಮೇಲೆ ಲೋಕಾಯುಕ್ತ ದಾಳಿ

0
620


ಕಾರ್ಕಳ: ಆದಾಯ ಮೀರಿ ಆಸ್ತಿ ಸಂಪಾದಿಸಿರುವ ಆರೋಪದ ಮೇಲೆ ಮೇ 31ರ ಮುಂಜಾನೆ ಕಾರ್ಕಳ ಮೆಸ್ಕಾಂ ಲೆಕ್ಕಾಧಿಕಾರಿ ಗಿರೀಶ್ ರಾವ್ ಅವರ ಮನೆ, ಕಚೇರಿ ಹಾಗೂ ಬೈಪಾಸ್‌ನಲ್ಲಿರುವ ಅವರ ಮಾಲಕತ್ವದ ಕಾರ್ಕಳ ಇನ್ ವಾಣಿಜ್ಯ ಸಂಕೀರ್ಣದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಒಟ್ಟು 2.89 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.ಲೋಕಾಯುಕ್ತ ಎಸ್. ಪಿ. ಕುಮಾರಚಂದ್ರ ನೇತೃತ್ವದಲ್ಲಿ 5 ತಂಡ ಮುಂಜಾನೆ 5.30ಕ್ಕೆ ದಾಳಿ ಮಾಡಿ ಇಡೀ ದಿನ ಶೋಧ ಕಾರ್ಯಾಚರಣೆ ನಡೆಸಿತು. ಈ ವೇಳೆ ಗಿರೀಶ್ ರಾವ್‌ಗೆ ಸಂಬಂಧಿಸಿದಂತೆ 5 ನಿವೇಶನ, 1 ವಾಸದ ಮನೆ, 1 ವಾಣಿಜ್ಯ ಮಳಿಗೆ, 30.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

7 ಅಧಿಕಾರಿಗಳ ಮೇಲೆ ದಾಳಿ

ಅಕ್ರಮ ಸಂಪತ್ತು ಹೊಂದಿರುವ ಆರೋಪದ ಮೇಲೆ ಶನಿವಾರ ಗಿರೀಶ್ ರಾವ್ ಸೇರಿದಂತೆ ರಾಜ್ಯದ ಏಳು ಮಂದಿ ಸರಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ದಾವಣಗೆರೆ, ಬೆಳಗಾವಿ, ಧಾರವಾಡ, ಬಾಗಲಕೋಟೆ, ಬಳ್ಳಾರಿ, ಉಡುಪಿ ಹಾಗೂ ಗದಗ ಜಿಲ್ಲೆಗಳ 33 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ, ಆರೋಪಿತ ಅಧಿಕಾರಿಗಳ ಮನೆ ಹಾಗೂ ಕಚೇರಿಗಳಲ್ಲಿ ಶೋಧ ನಡೆಸಿದರು. ಕೆಲ ಅಧಿಕಾರಿಗಳ ಮನೆಯಲ್ಲಿ ಕಂತೆ ಕಂತೆ ನೋಟುಗಳು, ಕೆಜಿಗಟ್ಟಲೇ ಬಂಗಾರ, ಐಷಾರಾಮಿ ಕಾರು, ಬೈಕ್‌ಗಳು, ಜಮೀನಿನ ದಾಖಲೆ ಪತ್ರಗಳು ದೊರೆತಿದ್ದು, ಒಟ್ಟು 24.47 ಕೋಟಿ ರೂ. ಮೌಲ್ಯದ ಅಕ್ರಮ ಸಂಪತ್ತು ಪತ್ತೆಯಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here