ಕಾರ್ಕಳ: ಅತಿವೇಗದಿಂದ ಧಾವಿಸಿ ಬಂದ ಟಿಪ್ಪರ್ ಲಾರಿಯೊಂದು ಮುಂದೆ ಹೋಗುತ್ತಿದ್ದ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ಗುರುವಾರ ಬೆಳಗ್ಗೆ ಕಾರ್ಕಳದ ಪಳ್ಳಿ ಅಡಪಾಡಿ ಹತ್ತಿರ ನಡೆದಿದೆ.
ಮೃತಪಟ್ಟ ಯುವಕನನ್ನು ಹಿರಿಯಡ್ಕ ಕುಜಂಬೈಲು ನಿವಾಸಿ ಗಣೇಶ್ ನಾಯಕ್ (27) ಎಂದು ಗುರುತಿಸಲಾಗಿದೆ.
ಗಣೇಶ್ ನಾಯಕ್ ಅವರು ತನ್ನ ಬೈಕ್‌ನಲ್ಲಿ ಹಂಪನಕಟ್ಟೆ ಕಡೆಗೆ ಹೋಗುತ್ತಿರುವಾಗ ಆರೋಪಿ ತನ್ನ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೈಕ್‌ಗೆ ಹಿಂಬದಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಗಣೇಶ ನಾಯಕ್ ಇವರು ಬೈಕ್‌ಗೆ ಸಮೇತ ರಸ್ತೆಯಲ್ಲಿ ಬಿದ್ದರು.
ಇದೇ ವೇಳೆ ಟಿಪ್ಪರ್ ಲಾರಿಯ ಹಿಂಬದಿಯ ಟಯರ್ ಹೆಲ್ಮೆಟ್ ಹಾಕಿದ ಗಣೇಶ ನಾಯಕ್ ಇವರ ತಲೆಯ ಮೇಲೆ ಹತ್ತಿ ಹೋಗಿದ್ದು, ಇದರ ಪರಿಣಾಮ ಗಂಭೀರ ಸ್ವರೂಪದ ಗಾಯಗೊಂಡ ಗಣೇಶ ನಾಯಕ್ ಇವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

